ಬೆಳಗಾವಿ: ಪಂಚಮಸಾಲಿ ಸಮಾಜದವರು ಬಹು ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ. ತಮ್ಮ ಪಾಡಿಗೆ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಗೂ ಸರ್ಕಾರದ ಗಮನಕ್ಕೆ ತರಲು ಸಮಾವೇಶ ಮಾಡಿದ್ರು, ಸಮಾವೇಶದಲ್ಲಿ ಸಾವಿರಾರು ಜನರು ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಿದ್ರು. ಆದರೆ, ಶಾಂತಿಯುತ ಹೋರಾಟ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಅಶ್ವತ್ಥ ನಾರಾಯಣ್ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂಟಲಿಜೆನ್ಸ್ ಸಂಪೂರ್ಣವಾಗಿ ಫೇಲ್ ಆಗಿದೆ. ಇದನ್ನು ಮುಚ್ಚಿಕೊಳ್ಳಲು ಇಲ್ಲಸಲ್ಲದ ಆರೋಪವನ್ನು ಬಿಜೆಪಿ ಮೇಲೆ ಮಾಡ್ತಿದೆ. ಶಾಂತಿಯುತ ಹೋರಾಟ ಮಾಡ್ತಿದ್ದ ಪಂಚಮಸಾಲಿ ಸಮಾಜದ ಹೋರಾಟ ಹತ್ತಿಕ್ಕುವ, ಕಳಂಕ ತರುವ ಪ್ರಯತ್ನ ಮಾಡಿದ್ರು ಇದನ್ನ ಖಂಡಿಸುತ್ತೇವೆ. ಸರ್ಕಾರದ ವಿಫಲತೆ ಬಯಲಿಗೆ ತರುವ ಪ್ರಯತ್ನ ಬಿಜೆಪಿ ಮಾಡಿದೆ. ಸರ್ಕಾರ ಎಡವಿರೋದನ್ನು ಬಿಜೆಪಿ ಬಯಲಿಗೆ ತಂದಿದೆ ಎಂದರು.
ಒನ್ ನೇಷನ್ಸ್ ಒನ್ ಎಲೆಕ್ಷನ್ ಅನೋದು ಭರವಸೆದಾಯಕ ನೀತಿ ಕಾನೂನು. ಇಡೀ ದೇಶದಲ್ಲಿ ಯಾವಾಗಲೂ ಚುನಾವಣೆ ನಡೆಯುತ್ತದೆ, ಇದಕ್ಕೆ ಇತಿಶ್ರೀ ಹೇಳಿ ಸುಧಾರಣೆ ಕಾಣಬೇಕು. ಹೆಚ್ಚಿನ ಸಮಯವನ್ನು ರಾಜಕೀಯಕ್ಕೆ ಕೊಡೋ ಬದಲು ಆಡಳಿತಕ್ಕೆ ಕೊಡಬೇಕು. ಪ್ರಜಾಪ್ರಭುತ್ವದಲ್ಲಿನ ಚುನಾವಣೆಗಳು ಜನರ ಆಶೋತ್ತರಗಳು, ಸಬಲೀಕರಣಕ್ಕೆ ಪೂರಕವಾಗಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಸುಧಾರಣೆ ಕಾಣುವಂತೆ ಆಗುತ್ತೆ. ಕೇಂದ್ರ ನರೇಂದ್ರ ಮೋದಿ ಸರ್ಕಾರ ನಾಯಕತ್ವದಲ್ಲಿ ಅನುಮೋದನೆ ಕೊಟ್ಟು ಜಾರಿಗೆ ತರಲು ಹೊರಟಿದ್ದಾರೆ ಇದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
PublicNext
13/12/2024 01:37 pm