ಬೆಳಗಾವಿ: ಸ್ವಾಮೀಜಿ ಒಬ್ಬರಿಂದ ಚುನಾವಣೆ ಗೆಲ್ಲಿಸಲು ಸಾಧ್ಯವಿದೆ. ಎಲ್ಲಾ ಸಮಾಜದ ಬೆಂಬಲದಿಂದ ಜನಪ್ರತಿನಿಧಿ ಆಗ್ತಾರೆ. ಶೋಷಿತ ವರ್ಗದ ಮಹಾ ಒಕ್ಕೂಟ 2ಎ ಮೀಸಲಾತಿ ವಿರೋಧಿಸಿದೆ. ಸರ್ಕಾರದ ಸಾಧಕ ಬಾಧಕ ಪರಿಶೀಲನೆ ಮಾಡಿ, ನಿರ್ಧಾರ ನೀಡಬೇಕಾಗಿದೆ ಎಂದು ಪಂಚಮಸಾಲಿ ಸ್ವಾಮೀಜಿಗೆ ಸಚಿವ ಕೆ.ಎನ್.ರಾಜಣ್ಣ ತೀರುಗೇಟು ನೀಡಿದರು.
ಸರ್ಕಾರದ ವಿರುದ್ಧ ಜಯಮೃತ್ಯುಂಜಯ ಶ್ರೀಗಳು ನೀಡಿದ ಹೇಳಿಕೆಗೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ಅಂದ್ರೆ ಸತ್ಯಾಗ್ರಹ ಅಧಿವೇಶನ ಅಂತಾ ಜನಾ ಹೇಳ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು. ಸ್ವಾಮೀಜಿ ಒಬ್ಬರಿಂದ ಚುನಾವಣೆ ಗೆಲ್ಲಿಸಲು ಸಾಧ್ಯವಿದೆ ಎಂದರು.
ಕೇಂದ್ರ ಸಚಿವ ಸಂಪುಟದಲ್ಲಿ ಒಂದು ದೇಶ ಒಂದು ಕಾನೂನಿಗೆ ಒಪ್ಪಿಗೆ ಪಡೆದಿದ್ದಾರೆ. ಇವಾಗ ಲೋಕಸಭೆಯಲ್ಲಿ ಬಿಜೆಪಿಗೆ 60 ಜನ ಸದಸ್ಯರ ಕೊರತೆಯಿದೆ. ಇದರ ಜಾರಿಯಿಂದ ಅನುಕೂಲ, ಅನಾನುಕೂಲ ಎರಡೂ ಇವೆ. ಸಮ್ಮಿಶ್ರ ಸರ್ಕಾರ ಇರೋ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಜಾರಿ ಮಾಡಬೇಕು ಎಂದರು
PublicNext
13/12/2024 11:56 am