ಬೆಳಗಾವಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು 1964ರಲ್ಲಿ 'ಒನ್ ನೇಷನ್ ಒನ್ ಎಲೆಕ್ಷನ್' ಕುರಿತು ಕಲ್ಪನೆ ಮಾಡಿದ್ದರು. ಈಗ ಇದು ಯಾವ ರೀತಿ ಇದೆ ಗೊತ್ತಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಜಿಟಲ್ ಇಂಡಿಯಾ, ಖೋಲೋ ಇಂಡಿಯಾ, ಮೇಕ್ ಇನ್ ಇಂಡಿಯಾ ಘೋಷಣೆಗಳಾಗಿವೆ. ಜಿಎಸ್‌ಟಿ ಘೋಷಣೆ ಮಾಡಿದರು. ಆದರೆ ಘೋಷಣೆಗಳ ಪರಿಣಾಮ ಏನಾಗಿದೆ ಎಂದು ಹೇಳಲಿ, ಇವುಗಳ ಮೇಲೆ ಅಭಿವೃದ್ಧಿ ಏನಾಗಿದೆ ಎಂದು ಹೇಳಲಿ. ಮೇಕ್ ಇನ್ ಇಂಡಿಯಾ ಏನಾಯ್ತು ಎಂದು ಪ್ರಶ್ನಿಸಿದರು.
ಒನ್ ನೇಷನ್ ಒನ್ ಎಲೆಕ್ಷನ್ ಸ್ಲೋಗನ್ ಆಗಬಾರದು. ಇದು ಪ್ರಚಾರ ಆಗಬಾರದು ಏನು ಮಾಡುತ್ತಾರೆ ಹೇಳಲಿ. 11 ವರ್ಷಗಳಿಂದ ಇದೆ ನಡೆಸುತ್ತಿದೆ ಎಂದು ಪರೋಕ್ಷವಾಗಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಸದನದಲ್ಲಿ ವಕ್ಫ್ ಚರ್ಚೆ ವಿಚಾರವಾಗಿ ನಾವು ಚರ್ಚೆಗೆ ತಯಾರಿದ್ದೇವೆ. ವಿರೋಧ ಪಕ್ಷಗಳು ವಕ್ಫ್ ಕುರಿತು ಯಾವುದೇ ದಾಖಲೆ ಇಲ್ಲದೆ ಮಾತನಾಡುತ್ತಿದ್ದಾರೆ. ವಕ್ಫ್ ಅನಾನುಕೂಲವಾಗಿದೆ ಎಂದು ದಾಖಲೆ ನೀಡಲಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ 4500ಕ್ಕೂ ಅಧಿಕ ಆಸ್ತಿ ವಕ್ಫ್ ಮಾಡಿದ್ದಾರೆ ಎಂದರು.
ಉತ್ತರ ಕಾರ್ನಾಟಕ ಅಭಿವೃದ್ಧಿ ಕುರಿತು ಬಿಜೆಪಿಯವರಿಗೆ ಮನಸ್ಸಿಲ್ಲ. ಯುಟಿ ಖಾದರ್ ಸಭಾಪತಿಗಳಾದ ಬಳಿಕ ಅತಿಹೆಚ್ಚು ಚರ್ಚೆ ಮಾಡಲು ಬಿಜೆಪಿಯವರಿಗೆ ನೀಡಿದ್ದಾರೆಂದು ವಾಗ್ದಾಳಿ ನಡೆಸಿದರು.
PublicNext
13/12/2024 01:39 pm