ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮೂರು ಪಕ್ಷಗಳ ಚುನವಾಣಾ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ಸಿದ್ದರಾಮಯ್ಯನವರ ಬಣದಿಂದ ಸಿದ್ದರಾಮೋತ್ಸವಕ್ಕೆ ಮುಂದಾಗಿದ್ದು, ಸಿದ್ದರಾಮಯ್ಯ ಉತ್ಸವ ಕಾಂಗ್ರೆಸ್ ಹಾಸ್ಯೋತ್ಸವ ಎಂದು ಬಿಜೆಪಿ ಟ್ವಿಟರ್ ಮೂಲಕ ಲೇವಡಿ ಮಾಡಿದೆ.
ಸಿದ್ದರಾಮೋತ್ಸವದಿಂದ ಎರಡರಲ್ಲಿ ಯಾವುದಾದರೂ ಒಂದು ನಿಶ್ಚಿತ. ತಮ್ಮನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸದಿದ್ದರೆ, ಸಿದ್ದರಾಮಯ್ಯ ಪಕ್ಷ ಬಿಡುತ್ತಾರೆ, ಸಿದ್ದರಾಮಯ್ಯ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಡಿಕೆ ಶಿವಕುಮಾರ್ ಪಕ್ಷ ಒಡೆಯುತ್ತಾರೆ.
ವ್ಯಕ್ತಿಪೂಜೆ ಬೇಡ, ಪಕ್ಷಪೂಜೆ ಮಾಡಿ ಎಂದ ಡಿಕೆಶಿ ಮೂಲೆ ಗುಂಪಾಗುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲೇ ನಡೆಯುವ ವ್ಯಕ್ತಿಪೂಜೆಗೆ ರಾಹುಲ್ ಗಾಂಧಿ ಮುಖ್ಯ ಅತಿಥಿಯಂತೆ, ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿ ನಿಂತಿದೆಯೇ? ಅಥವಾ ಡಿಕೆಶಿ ತಯಾರಿಸಿದ ಊಟವನ್ನು ಸಿದ್ದರಾಮಯ್ಯಗೆ ಬಡಿಸುವ ಹುನ್ನಾರವೇ ಇದು..? ಎಂದು ಲೇವಡಿ ಮಾಡಿದೆ.
ಒಡೆದ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಒಡೆದೇ ಇರುತ್ತದೆ.ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕ ಅವರದ್ದು ಎಂದೂ ಒಂದಾಗದ ಒಡಕು ಮನಸು. ಬ್ರೇಕ್ ಪಾಸ್ಟ್ ಮೀಟಿಂಗ್ ನಿಂದ ಇದೆಲ್ಲ ಸರಿ ಹೋಗುವ ಮಾತೇ..?ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
PublicNext
15/07/2022 06:35 pm