ದಾವಣಗೆರೆ: ಸಂಘ ಪರಿವಾರದವರ ವಿರುದ್ಧ ಮಾತನಾಡಿದರೆ ಭಸ್ಮ ಆಗುತ್ತಾರೆ. ಅಂಥವರು ದೇಶದ್ರೋಹಿಗಳು ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕುಟುಂಬ ರಾಜಕಾರಣ ಮಾಡುವುದು ಜೆಡಿಎಸ್ ನವರು. ದೇವೇಗೌಡರಿಂದ ಹಿಡಿದು ಮೊಮ್ಮಕ್ಕಳು ರಾಜಕಾರಣದಲ್ಲಿದ್ದಾರೆ. ಆರ್ ಎಸ್ ಎಸ್ ಹಾಗೂ ಹಿಂದುತ್ವದ ವಿರುದ್ಧ ಮಾತನಾಡಿದರೆ "ಭಸ್ಮಾಸುರ- ಮೋಹಿನಿ" ಕಥೆಯಂತೆ ಭಸ್ಮ ಆಗುವುದು ಖಚಿತ ಎಂದು ಹರಿಹಾಯ್ದರು.
ಆರ್ ಎಸ್ ಎಸ್ ಬಗ್ಗೆ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಗೆ ನಾಚಿಕೆಯಾಗಬೇಕು. ಹೆಚ್. ಡಿ. ರೇವಣ್ಣ ಮಂತ್ರಿಯಾಗಿದ್ದಾಗ ಹಾಗೂ ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಸಂಘ ಪರಿವಾರದ ಬಗ್ಗೆ ಮಾತನಾಡುವ ಯೋಗ್ಯತೆ ಹಾಗೂ ನೈತಿಕತೆ ಕಾಂಗ್ರೆಸ್ ಮುಖಂಡರು ಹಾಗೂ ಕುಮಾರಸ್ವಾಮಿಗೆ ಇಲ್ಲ. ಪರ್ಸಂಟೇಜ್ ಹಾಗೂ ಲೂಟಿ ಮಾಡಿದವರು ನೀವು ಎಂದು ಆರೋಪಿಸಿದರು.
PublicNext
28/06/2022 05:28 pm