ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಡೀ ಭಾರತ ಕಾಶ್ಮೀರದಂತೆ ಭಾಸವಾಗುತ್ತಿದೆ: ಸುಬ್ರಮಣಿಯನ್‌ ಸ್ವಾಮಿ

ಬೆಂಗಳೂರು: ಇಡೀ ಭಾರತವಿಂದು ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ಪ್ರವಾದಿ ಮಹಮ್ಮದ್ ಕುರಿತು ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹಾಗೂ ಉಚ್ಛಾಟಿತ ಬಿಜೆಪಿ ವಕ್ತಾರ ನವೀನ್ ಜಿಂದಾಲ್ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಇಂದು ಐತಿಹಾಸಿಕ ಜಾಮಿಯಾ ಮಸೀದಿ ಮುಂದೆ ಸೇರಿದ ಸಾವಿರಾರು ಮುಸ್ಲಿಮರು ಅವಹೇಳನಕಾರಿಯಾಗ ಮಾತನಾಡಿದ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ ಅವರು, "ಇಡೀ ಭಾರತವಿಂದು ಕಾಶ್ಮೀರದಂತೆ ಭಾಸವಾಗುತ್ತಿದೆ. ಇಡೀ ಭಾರತದಂತೆ ಕಾಶ್ಮೀರವೂ ಇರಬೇಕು ಎಂದು ಅಪೇಕ್ಷಿಸಿದ್ದೆವು. ಈ ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಬಳಿ ಯಾವುದಾದರೂ ಸುಳಿವು ಇದೆಯೇ? ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿ ಹತೋಟಿಗೆ ಬರದಿದ್ದರೆ ಶಾ ಅವರು ಗೃಹ ಸಚಿವರಾಗಿ ಉಳಿಯುತ್ತಾರೆಯೇ? ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ" ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Edited By : Vijay Kumar
PublicNext

PublicNext

10/06/2022 06:18 pm

Cinque Terre

34.43 K

Cinque Terre

4

ಸಂಬಂಧಿತ ಸುದ್ದಿ