ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಶಾಸಕ ರೇಣುಕಾಚಾರ್ಯ ಟಪ್ಪಾಂಗುಚ್ಚಿ ಸ್ಟೆಪ್ ಗೆ ಜನರು ಫಿದಾ...!

ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಟಪ್ಪಾಂಗುಚ್ಚಿ ಸ್ಟೆಪ್ ಗೆ ಜನರು ಫಿದಾ ಆಗಿದ್ದಾರೆ.

ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಕುಣಿದು ಕುಪ್ಪಳಿಸಿದರು.

ಖ್ಯಾತ ಗಾಯಕ ಚಂದನ್ ಶೆಟ್ಟಿ ನೇತೃತ್ವದ ತಂಡ ರಸಮಂಜರಿ ನಡೆಸಿಕೊಟ್ಟಿತ್ತು. ಒಂದೇ ಒಂದು ಪೆಗ್ಗಿಗೆ ಸೇರಿದಂತೆ ಕನ್ನಡ ಸಿನಿಮಾ ಹಾಡುಗಳನ್ನು ಗಾಯಕ ಚಂದನ್ ಶೆಟ್ಟಿ ಹಾಡಿದರು. ರಾಕ್ ಮ್ಯೂಸಿಕ್ ಗೆ ಕಳೆದು ಹೋದ ಜನರು ಸಖತ್ತಾಗಿಯೇ ಡ್ಯಾನ್ಸ್ ಮಾಡಿ ಸಂತೋಷಪಟ್ಟರು. ರೇಣುಕಾಚಾರ್ಯ ವೇದಿಕೆಗೆ ಬರುತ್ತಿದ್ದಂತೆಯೇ ರಾಕ್ ಮ್ಯೂಸಿಕ್ ನ ಅಬ್ಬರ ಮತ್ತಷ್ಟು ಜೋರಾಯಿತು. ರೇಣುಕಾಚಾರ್ಯ ಸಹ ಕುಣಿದು ಕುಪ್ಪಳಿಸತೊಡಗಿದಾಗ ಜನರಲ್ಲಿ ಮತ್ತಷ್ಟು ಜೋಶ್ ಬಂತು.

Edited By : Manjunath H D
PublicNext

PublicNext

06/06/2022 05:52 pm

Cinque Terre

44.88 K

Cinque Terre

0

ಸಂಬಂಧಿತ ಸುದ್ದಿ