ಬೆಂಗಳೂರು: ತನ್ನಿಂದಾದ ತಪ್ಪಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿದ್ದಾರೆ. ಹೌದು ಚನ್ನರಾಯಪಟ್ಟಣದ ಸಭೆಯೊಂದರಲ್ಲಿ ಭಾಷಣ ಮಾಡುವ ಭರದಲ್ಲಿ ಮಡಿವಾಳ ಸಮಾಜದ ಬಗ್ಗೆ ಗಾದೆಯೊಂದು ಹೇಳಿದ್ದರು. ಈ ಗಾದೆಯಿಂದ ಮಡಿವಾಳ ಸಮಾಜಕ್ಕೆ ನೋವಾಗಿದ್ದು, ಸಿದ್ದರಾಮಯ್ಯ ಕ್ಷಮೆ ಕೇಳಿದ್ದಾರೆ.
ಇನ್ನು, ಈ ವಿಚಾರವಾಗಿ ಸಿದ್ದರಾಮಯ್ಯನವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ ಮಡಿವಾಳ ಸಮುದಾಯಕ್ಕೆ ಕ್ಷಮೆ ಕೋರಿದ್ದಾರೆ. ಚನ್ನರಾಯಪಟ್ಟಣದ ಸಭೆಯೊಂದರಲ್ಲಿ ಮಾಡಿದ ಭಾಷಣದಲ್ಲಿ ಬಳಸಿದ ಗಾದೆ ಮಾತುಗಳಿಂದ ಮಡಿವಾಳ ಸಮಾಜದ ನನ್ನ ಬಂಧುಗಳ ಮನಸ್ಸಿಗೆ ನೋವಾಗಿದೆ ಎಂದು ಗೊತ್ತಾಯಿತು. ಇದಕ್ಕಾಗಿ ವಿಷಾದಿಸುತ್ತೇನೆ ಎಂದಿದ್ದಾರೆ.
ನಾನು ಯಾವುದೇ ಸಮುದಾಯ ಇಲ್ಲವೇ ವೃತ್ತಿಯನ್ನು ಅಗೌರವಿಸುವ ಉದ್ದೇಶದಿಂದ ಆಡಿದ ಮಾತಲ್ಲ. ದುಡಿದು ತಿನ್ನುವ ಎಲ್ಲ ವೃತ್ತಿಗಳ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಮಡಿವಾಳ ಸಮಾಜದ ಬಂಧುಗಳು ವಿವಾದವನ್ನು ಬೆಳೆಸಲು ಹೋಗದೆ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದು ವಿನಂತಿಸಿದ್ದಾರೆ.
PublicNext
02/06/2022 07:16 pm