ಗಾಂಧಿನಗರ: ಕಾಂಗ್ರೆಸ್ ಪಕ್ಷದಲ್ಲಿ ಹಿಂದುತ್ವವನ್ನ ವಿರೋಧಿಸುತ್ತಲೇ ಹೆಸರಾಗಿದ್ದ ಯುವ ನಾಯಕ ಹಾರ್ದಿಕ್ ಪಟೇಲ್ ಸಡನ್ ಆಗಿ ಈಗ ಹಿಂದುತ್ವದ ಪರವಾಗಿ ಮಾತಾಡುತ್ತಿದ್ದಾರೆ. ಕಳೆದ ವಾರವಷ್ಟೇ ಕಾಂಗ್ರೆಸ್ ಪಕ್ಷ ತೊರೆದ ಹಾರ್ದಿಕ್ ಪಟೇಲ್, ಅಧಿಕೃತವಾಗಿಯೇ ಬಿಜೆಪಿ ಪಕ್ಷವನ್ನ ಸೇರಿದ್ದಾರೆ.
ಟ್ವಿಟರ್ ಮೂಲಕವೇ ಬಿಜೆಪಿ ಸೇರ್ಪಡೆಯ ಸುದ್ದಿಯನ್ನ ಇಂದು ಬೆಳಗ್ಗೆ ಹೇಳಿಕೊಂಡ ಹಾರ್ದಿಕ್ ಪಟೇಲ್, ಹೊಸ ಅಧ್ಯಾಯವನ್ನ ಆರಂಭಿಸುತ್ತಿದ್ದೇನೆ. ಒಬ್ಬ ಪುಟ್ಟ ಯೋಧನಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡುವನು ಅಂತಲೇ ಹಾರ್ದಿಕ್ ಪಟೇಲ್ ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ,ಸಾಮಾಜಿಕ ಹಿತಾಸಕ್ತಿ ಹಾಗೂ ಪ್ರಾದೇಶಿಕ ಹಿತಾಸಕ್ತಿ ಮೂಲಕ ಈಗ ಹೊಸ ಅಧ್ಯಾಯವನ್ನ ಆರಂಭಿಸುತ್ತಿದ್ದೇನೆ ಅಂತಲೇ ಹಾರ್ದಿಕ್ ಪಟೇಲ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
PublicNext
02/06/2022 10:03 am