ರಾಜ್ಯ ಮಾತ್ರವಲ್ಲದೇ ರಾಷ್ಟ್ರಾದ್ಯಂತ ಭಾರೀ ಸುದ್ದಿಯಾಗಿದ್ದ ಉಡುಪಿಯ ಸಮುದ್ರದಲ್ಲಿ ಅಳವಡಿಸಲಾಗಿದ್ದ ತೇಲುವ ಸೇತುವೆ ಉದ್ಘಾಟನೆಯಾದ ಒಂದು ವಾರದಲ್ಲಿ ಕುಸಿದು ಬಿದ್ದಿದೆ.ಉಡುಪಿಯ ಮಲ್ಪೆ ಬೀಚ್ ನಲ್ಲಿ ಮೇ 6 ರಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರ ಸಮ್ಮುಖದಲ್ಲಿ ಈ ತೇಲುವ ಸೇತುವೆ ಉದ್ಘಾಟನೆಗೊಂಡಿತ್ತು.
ಆದರೆ ಉದ್ಘಾಟನೆಯಾದ ಒಂದು ವಾರದಲ್ಲಿ ಈ ಸೇತುವೆ ಕುಸಿದು ಬಿದ್ದಿರುವುದಕ್ಕೆ ರಾಜ್ಯದಲ್ಲಿ ಬಿಜೆಪಿ 40% ಕಮಿಷನ್ ಪಡೆಯುತ್ತಿರುವುದೇ ಕಾರಣವಿರಬಹುದೇ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಟ್ವೀಟ್ ಮೂಲಕ ಆರೋಪಿಸಿದ್ದಾರೆ.ಲಂಚದ ಆಸೆಗೆ ಬಿದ್ದ ಬೊಮ್ಮಾಯಿ ಸರ್ಕಾರ ಬ್ರ್ಯಾಂಡ್ ಕರ್ನಾಟಕದ ಹೆಸರು ಹಾಳು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
PublicNext
10/05/2022 05:38 pm