ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಕಿಪೀಡಿಯಾ ಮೇಲೆ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಅಗ್ನಿಹೋತ್ರಿ ಗರಂ: ಕಾರಣವೇನು?

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೈಜ ಘಟನೆಯನ್ನು ಆಧರಿಸಿದ ಚಿತ್ರ.ಆದರ ವಿಕಿಪೀಡಿಯಾದಲ್ಲಿ ಇದು ಕಾಲ್ಪನಿಕ ಕಥೆ ಎಂದು ಬರೆಯಲಾಗಿದೆ. ಹಾಗಾಗಿ ಜ್ಯಾತ್ಯಾತೀತ ನಿಲುವಿನ ಉಲ್ಲಂಘನೆಯಾಗಿದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ವಿದೇಶಿ ಪತ್ರಕರ್ತರು ಕೂಡ ಸಿನಿಮಾದ ಬಗ್ಗೆ ಸಲ್ಲದ ಪ್ರಚಾರ ಮಾಡುತ್ತಿರುವುದಕ್ಕೂ ಅವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

‘ವಿಕಿಪೀಡಿಯಾವನ್ನು ಜಗತ್ತಿನ ವಿಶ್ವಕೋಶ ಎಂದು ಕರೆಯಲಾಗುತ್ತಿದೆ. ಆದರೆ, ಅದು ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಅದಕ್ಕೆ ಪೂರಕ ಸಾಕ್ಷ್ಯವನ್ನು ಒದಗಿಸಿದ್ದೇನೆ. ಆದರೂ, ವಿಕಿಪೀಡಿಯಾದಲ್ಲಿ ಅದು ಕಾಲ್ಪನಿಕ ಕಥೆ ಎಂದು ಉಲ್ಲೇಖಿಸಲಾಗಿದೆ. ಇದು ಉದ್ದೇಶ ಪೂರ್ವಕವಾಗಿ ಆಗಿರುವ ಪ್ರಮಾದ’ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

03/05/2022 08:18 pm

Cinque Terre

49.8 K

Cinque Terre

7

ಸಂಬಂಧಿತ ಸುದ್ದಿ