ಮೈಸೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪನವರ ತಲೆ ದಂಡವಾಗಿದೆ.ಇಂದು ಸಂಜೆ ರಾಜೀನಾಮೆ ನೀಡಲಿರುವ ಅವರು ಹೊರಡುವ ಗಡಿಬಿಡಿಯಲ್ಲೂ 29 ಮಂದಿ ಪಿಡಿಓಗಳ ವರ್ಗಾವಣೆ ಆದೇಶವನ್ನು ಜಾರಿಗೊಳಿಸಿದ್ದಾರೆ.
ಏ. 12 ರಂದು ಸಂತೋಷ್ ಆತ್ಮಹತ್ಯೆ ಆಗುತ್ತಿದ್ದಂತೆ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಒತ್ತಡ ಹೆಚ್ಚಿದ್ದ ಬೆನ್ನಲ್ಲೇ ಸಚಿವರು ತರಾತುರಿಯಲ್ಲಿ ವರ್ಗಾವಣೆ ಆದೇಶವನ್ನು ಅಧಿಕೃತಗೊಳಿಸಿದ್ದಾರೆ.ಇನ್ನು ಈ ವರ್ಗಾವಣೆ ಹಿಂದೆ ಲಕ್ಷಾಂತರ ಹಣ ಪಡೆದಿರುವ ಆರೋಪ ಕೂಡ ಕೇಳಿಬಂದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
PublicNext
15/04/2022 12:46 pm