ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯ ಕಣ್ಣಿಗೆ ಉಗ್ರರು ಸ್ವಾತಂತ್ರ್ಯ ಹೋರಾಟಗಾರರಂತೆ ಕಂಡರೆ ಅಚ್ಚರಿ ಇಲ್ಲ: ರೇಣುಕಾಚಾರ್ಯ ಕಿಡಿ

ಬೆಂಗಳೂರು "ಕಾಮಾಲೆ ಕಣ್ಣಿಗೆ ಕಾಣುವುದೆಲ್ಲವೂ ಹಳದಿ ಎಂಬಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಲ್ ಕೈದಾ ಉಗ್ರಗಾಮಿ ಸಂಘಟನೆ ಹಾಗೂ ಅದರ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಮುಂದೊಂದು ದಿನ ವೀರ ಸ್ವಾತಂತ್ರ್ಯ ಹೋರಾಟಗಾರರಾಗಿ ಕಂಡರೂ ಅಚ್ಚರಿಯಿಲ್ಲ" ಎಂದು ಶಾಸಕ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, 'ಕಾಂಗ್ರೆಸ್ ಪಕ್ಷ ಇಂತಹ ಸೈತನಾರನ್ನೇ ಪೋಷಿಸಿಕೊಂಡು ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ.! ನಿಮ್ಮ ಹೇಳಿಕೆಯಲ್ಲಿ ನಮಗೆ ಹೊಸದೇನು ಕಾಣುತ್ತಿಲ್ಲ. ಅತಿಯಾದ ಓಲೈಕೆಯ ಪರಿಣಾಮ 2018 ರ ಚುನಾವಣೆಯಲ್ಲಿ ನಿಮ್ಮ ಪಕ್ಷದ ಸ್ಥಿತಿ ಏನಾಯಿತು ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಿ' ಎನ್ನುವ ಮೂಲಕ answer siddaramaiah ಎಂದು ಹ್ಯಾಷ್ ಟ್ಯಾಗ್ ಮಾಡಿದ್ದಾರೆ.

'ಇದು ಆರ್ ಎಸ್ ಎಸ್ ಸೃಷ್ಟಿ ಎನ್ನುವ ನಿಮಗೆ ಆತ್ಮಸಾಕ್ಷಿ ಎಂಬುದಿದ್ದರೆ. ಅಲ್​ಖೈದಾದ ಮುಖವಾಣಿ ಅಸ್​-ಸಾಹಬ್​ ಎಂಬ ಸಾಮಾಜಿಕ ಜಾಲತಾಣದಲ್ಲಿ ಅಮನ್-ಅಲ್​-ಜವಾಹಿರಿಯ ಮಾತನಾಡಿರುವ ವಿಡಿಯೋ ಒಂದು ಬಾರಿ ನೋಡಿ ನಂತರ ಸಂಘಪರಿವಾರದ ಬಗ್ಗೆ ಮಾತನಾಡಿ' ಎಂದು ಸಿದ್ದರಾಮಯ್ಯರಿಗೆ ರೇಣುಕಾಚಾರ್ಯ ಸವಾಲೆಸೆದಿದ್ದಾರೆ.

ಇನ್ಮೊಂದು ಟ್ವೀಟ್‌ನಲ್ಲಿ ಅವರು 'ಎಷ್ಟೇ ಆಗಲಿ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿ ಬಂದವರು ನೀವು. 2018 ರ ಚುನಾವಣೆಯಲ್ಲಿ ಆದ ಗತಿಯೇ 2023 ರ ಚುನಾವಣೆ ಯಲ್ಲಿ ಆಗುತ್ತದೆ. ನಿಮ್ಮ ತುಷ್ಟೀಕರಣಕ್ಕೆ ಜನತೆ ತಕ್ಕ ಪಾಠ ಕಲಿಸುವುದರಲ್ಲಿ ಸಂದೇಹವೇ ಬೇಡ. ಕಾದು ನೋಡಿ' ಎಂದಿದ್ದಾರೆ

Edited By : Nagaraj Tulugeri
PublicNext

PublicNext

07/04/2022 07:13 pm

Cinque Terre

70.44 K

Cinque Terre

3

ಸಂಬಂಧಿತ ಸುದ್ದಿ