ಬೆಂಗಳೂರು: ಟಿವಿ ಸುದ್ದಿ ಮಾಧ್ಯಮಗಳು ಜನರ ನಡುವೆ ಎಲ್ಲದರ ಬಗ್ಗೆ ಅಭಿಪ್ರಾಯ ಸೃಷ್ಟಿಕರ್ತರಾಗಿದ್ದಾರೆ.ದೂರು ಕೊಡೋದು ಇವರೇ, ಉತ್ತರ ನೀಡೋದೂ ಇವರೇ, ನಂತರ ತೀರ್ಪು ಕೊಡೋದೂ ಇವರೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಚುನಾವಣಾ ವ್ಯವಸ್ಥೆಗಳ ಮೇಲಿನ ಸುಧಾರಣೆಗೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಇಂದು ನಡೆದ ಚರ್ಚೆ ವೇಳೆ ಇಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಮೇಲೆ ಆಕ್ರೋಶ ಹೊರಹಾಕಿದರು.
ಶಾಂತಿಯ ರಾಜ್ಯದಲ್ಲಿ ಮಾಧ್ಯಮಗಳು ದೊಡ್ಡ ಬಿರುಕು ಮೂಡಿಸಿವೆ. ಟಿಆರ್‌ಪಿಗಾಗಿ, ಲಾಭಕ್ಕಾಗಿ ಸಮಾಜ ಒಡೆಯುತ್ತಿದ್ದಾರೆ. ಎಲ್ಲವನ್ನೂ ಜನಪ್ರತಿನಿಧಿಗಳ ಮೇಲೆ ದೂರುತ್ತಾರೆ. ಚುನಾವಣೆ ಪರಿಸ್ಥಿತಿ ಹದಗೆಡಲು ನಾವೇ ಕಾರಣ. ನಮ್ಮಿಂದಲೇ ತಪ್ಪು ಮಾಡ್ಕೊಂಡಿದ್ದೇವೆ. ಯಾರನ್ನೂ ದೂಷಿಸುವ ಅಗತ್ಯ ಇಲ್ಲ. ಹಿಂದೆಲ್ಲಾ ಅಭ್ಯರ್ಥಿಗಳಿಗೆ ಜನರೇ ಹಣ ಕೊಡ್ತಿದ್ರು. ಕೊನೆಯ ಎರಡು ದಿನ ಯಾವುದೇ ಪಕ್ಷದ ಅಭ್ಯರ್ಥಿಗಳು ಹಳ್ಳಿಗಳಿಗೆ ಬರದಂತೆ ರಸ್ತೆಗಳಲ್ಲಿ ದಿಮ್ಮಿಗಳನ್ನಿಡ್ತಿದ್ರು. ಆದ್ರೆ ಈಗ ಪರಿಸ್ಥಿತಿ ಬಹಳಷ್ಟು ಬದಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಟಿವಿ ಮಾಧ್ಯಮಗಳಿಂದ ಅಶಾಂತಿ ಸೃಷ್ಟಿಯಾಗಿದ್ದು, ಟಿಆರ್‌ಪಿಗಾಗಿ ಬೇಡದ ವರದಿಗಳನ್ನು ತೋರಿಸ್ತಾರೆ. ಸಮವಸ್ತ್ರ ಹೆಸರಲ್ಲಿ ಇಂತಹ ಅನಾಹುತ ಸೃಷ್ಟಿಗೆ ಮಾಧ್ಯಮಗಳೇ ಕಾರಣ. ಮಾಧ್ಯಮಗಳಿಂದ ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗಿದ್ದು, ಎರಡೂ ಸಮುದಾಯಗಳನ್ನು ಪ್ರಚೋದನೆ ಮಾಡಿ ಹೇಳಿಕೆ ಪಡೆಯುತ್ತಾರೆ ಎಂದು ಆರೋಪಿಸಿದರು.
PublicNext
30/03/2022 07:52 pm