ನವದೆಹಲಿ:ಪಂಚ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದೆ. ಆದರೆ ಈಗ ಬಿಜೆಪಿ ಹೈಕಮಾಂಡ್ ಕರ್ನಾಟಕ ಮತ್ತು ಗುಜರಾತ್ ಮೇಲೆ ಕಣ್ಣಿಟ್ಟಿದೆ. ಇದಕ್ಕೆ ಬೇಕಾದ ತಯಾರಿನೂ ಈಗಲೇ ಶುರು ಆಗಿದೆ.
ಹೈಕಮಾಂಡ್ ಪಕ್ಕಾ ಪ್ಲಾನ್ ಮಾಡುತ್ತಿದೆ. ಕರ್ನಾಟಕ ಮತ್ತು ಗುಜರಾತ್ ನಲ್ಲಿ ಗೆಲ್ಲುವ ಅಭ್ಯರ್ಥಿಗಳಾರು? ಪಕ್ಷದ ಸಿಂಬಲ್ ನಿಂದ ಗೆಲುವು ಸಾಧಿಸೋರು ಇನ್ಯಾರು? ಸ್ವತಃ ಬಲ ಮತ್ತು ಪಕ್ಷದ ಬದಲ ಎರಡೂ ಇಟ್ಟುಕೊಂಡು ಗೆಲ್ಲುವ ಆ ಅಭ್ಯರ್ಥಿ ಮತ್ಯಾರು ? ಹೀಗೆ ಗಪ್-ಚುಪ್ ಆಗಿಯೇ ಸರ್ವೆ ಮಾಡ್ತಿದೆ ಎನ್ನಲಾಗುತ್ತಿದೆ.
ಏಪ್ರಿಲ್,ಮೇ,ಜೂನ್ ಹೀಗೆ ಮೂರು ತಿಂಗಳು ಮೂರು ಗುಪ್ತ್ ಸರ್ವೆ ನಡೆಸೋ ಪ್ಲಾನ್ ಅನ್ನ ಬಿಜೆಪಿ ಹೈಕಮಾಂಡ್ ಹಾಕಿಕೊಂಡಿದೆ. ಜುಲೈ ಕೊನೆಯಲ್ಲಿ ಫೈನಲ್ ಪಟ್ಟಿ ಹೊರ ಬೀಳುವ ಚಾನ್ಸಸ್ ಜಾಸ್ತಿನೇ ಇದೆ.
PublicNext
29/03/2022 09:51 pm