ಮೈಸೂರು: ಸುಮ್ನೆ ಐದು ಬನ್ನಿ ಸರ್.. ನಮ್ಮ ಜೊತೆ ಕುಣೀರಿ ಎಂದು ಕರೆದರು. ನಾನು ಕೂಡ ಕುಣಿದು ಎರಡು ವರ್ಷ ಕಳೆದಿತ್ತು. ಹೀಗಾಗಿ ನಿನ್ನೆ ಜಾತ್ರೆಯಲ್ಲಿ ಐದು ನಿಮಿಷ ಕುಣಿದರಾಯ್ತು ಎಂದು ಹೋದವನು 40 ನಿಮಿಷ ಕುಣಿದುಬಿಟ್ಟೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಿನ್ನೆ ವೀರನ ಕುಣಿತ ಕುಣಿದ ಬಗ್ಗೆ ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪ್ರತಿ ದಿನ ವಾಕ್ ಮಾಡುವ ಕಾರಣ ನಾನು ಫಿಟ್ ಆಗಿದ್ದೇನೆ. ಫಿಟ್ ಆಗಿರುವುದರಿಂದ ನಿನ್ನೆ 40 ನಿಮಿಷ ಕುಣಿಯಲು ಸಾಧ್ಯವಾಯ್ತು. ನನಗೆ ಡಯಾಬಿಟಿಸ್ ಇದೆ. ಇದರಿಂದ ಸ್ವಲ್ಲ ಎನರ್ಜಿ ಕಡಮೆಯಾಗಿದೆ. ಉಳಿದಂತೆ ನಾನು ಫಿಟ್ ಇದ್ದೇನೆ. ಬಹಳ ವರ್ಷವಾದ ಕಾರಣ ಕೆಲವು ಸ್ಟೆಪ್ಸ್, ಕೆಲ ಹಾಡುಗಳನ್ನು ಮರೆತಿದ್ದೇನೆ. ನಿನ್ನೆಯೂ ಕುಣಿಯಬಾರದು ಅಂತಾ ಅಂದು ಕೊಂಡಿದ್ದೆ. ಜನರ ಒತ್ತಾಯ, ತಮಟೆ ಸದ್ದು ಕುಣಿಯುವಂತೆ ಮಾಡಿತು ಎಂದಿದ್ದಾರೆ.
PublicNext
25/03/2022 04:01 pm