ನವದೆಹಲಿ; ಪಂಚರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಇದರಿಂದ ಈಗ ಕಾಂಗ್ರೆಸ್ ನಲ್ಲಿ ಏನೂ ಸರಿಯಿಲ್ಲ. ಮೊನ್ನೆ ಕಾಂಗ್ರೆಸ್ ಪಕ್ಷದ ಗಾಂಧಿ ಫ್ಯಾಮಿಲಿ ಆತ್ಮಾವಲೋಕನ ಸಭೆ ನಡೆಸಿತ್ತು. ಆಗ ಗಾಂಧಿ ಫ್ಯಾಮಿಲಿಯ ಸೋನಿಯಾ ರಾಹುಲ್,ಪ್ರಿಯಾಂಕಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಲು ಮುಂದಾಗಿದ್ದರು.
ಸೋನಿಯಾ ಗಾಂಧಿ ವಿಚಾರದಲ್ಲಿ ಇದು ನಿಜವಾಗೋ ಚಾನ್ಸ್ ಜಾಸ್ತಿ ಇದೆ. ಪಕ್ಷದ ಹಿರಿಯ ನಾಯಕರನ್ನ ಒಳಗೊಂಡ ಜಿ23 ಗುಂಪು ಸೋನಿಯಾ ರಾಜೀನಾಮೆಗೆ ಒತ್ತಾಯಿಸುತ್ತಿದೆ.
ಸರಿಯಾಗಿಯೇ ಪ್ಲಾನ್ ಮಾಡಿದ್ದರೇ,ಕಾಂಗ್ರೆಸ್ ಪಕ್ಷ ಬಹುತೇಕ ಕಡೆಗೆ ಗೆಲುವು ಸಾಧಿಸಬಹುದಿತ್ತು ಅಂತಲೇ ಜಿ23 ಗುಂಪು ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಗಾಂಧಿ ಕುಟುಂಬದ ಸೋನಿಯಾ ತಲೆದಂಡ ಆಗುತ್ತದೆ ಅಂತಲೇ ಈಗ ಹೇಳಲಾಗುತ್ತಿದೆ.
PublicNext
18/03/2022 06:25 pm