ಚಂಡೀಗಢ: ಪಂಜಾಬ್‌ನಲ್ಲಿ ದೊಡ್ಡ ನಾಯಕರೆಲ್ಲ ಸೋತಿದ್ದಾರೆ. ಇಲ್ಲಿನ ಜನತೆ ಗೆದ್ದಿದ್ದಾರೆ ಎಂದು ಪಂಜಾಬ್‌ನ ಎಎಪಿ ನಾಯಕ ಭಗವಂತ್ ಮನ್ ಹೇಳಿದ್ದಾರೆ.
ಚುನಾವಣಾ ಫಲಿತಾಂಶದಲ್ಲಿ ತಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತ ನಂತರ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಪಂಜಾಬ್‌ನಲ್ಲಿ ದೊಡ್ಡ ನಾಯಕರೆಲ್ಲ ಸೋಲು ಕಂಡಿದ್ದಾರೆ. ಅಕಾಲಿ ದಳ ನಾಯಕ ಸುಖಬೀರ್ ಸಿಂಗ್ ಜಲಾಲಾಬಾದ್‌ನಲ್ಲಿ ಸೋತಿದ್ದಾರೆ. ಕ್ಯಾಪ್ಟಮ್ ಅಮರಿಂದರ್ ಸಿಂಗ್ ಪಟಿಯಾಲಾ ಕ್ಷೇತ್ರದಿಂದ ಸೋತಿದ್ದಾರೆ. ಸಿಧು ಹಾಗೂ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಕೂಡ ಸೋತಿದ್ದಾರೆ.
ಈ ಮೂಲಕ ಪಂಜಾಬ್‌ನ ಜನತೆ ಗೆದ್ದಿದ್ದಾರೆ ಎಂದು ಭಗವಂತ್ ಮನ್ ಹೇಳಿದ್ದಾರೆ.
PublicNext
10/03/2022 07:54 pm