ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಲವು ಮುಸ್ಲಿಂ ಗೂಂಡಾಗಳಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ: ಸಚಿವ ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಕೇಸ್ ಮರೆಮಾಚುವ ಮುನ್ನವೇ ಮತ್ತೊಂದು ಮಾರಣಾಂತಿಕ ಹಲ್ಲೆ ಪ್ರಕರಣ ನಡೆದಿದೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್ ಈಶ್ವರಪ್ಪ, ಬಿಜೆಪಿ ಕಾರ್ಯಕರ್ತ ಪ್ರಕಾಶ್ ಎನ್ನುವವರ ಸಹೋದರ ವೆಂಕಟೇಶ್ ಮೇಲೆ 3-4 ಮುಸ್ಲಿಂ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವೆಂಕಟೇಶ್ ಅವರು ತಮ್ಮ ನಾಯಿಯೊಂದಿಗೆ ಬೆಳಗಿನ ವಾಕಿಂಗ್ ಹೋಗಿದ್ದಾಗ ಅವರನ್ನು ಮನಬಂದಂತೆ ಥಳಿಸಲಾಗಿದೆ. ವೆಂಕಟೇಶ್​ಗೆ ತೀವ್ರ ರಕ್ತಸ್ರಾವವಾಗಿದೆ ಮತ್ತು ಅವರನ್ನು ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ. ಕೇವಲ ಬೆರಳೆಣಿಕೆಯಷ್ಟು ಇರುವ ಕೆಲವು ಮುಸ್ಲಿಂ ಗೂಂಡಾಗಳು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಇಡೀ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದಿದ್ದಾರೆ.

ಮುಸ್ಲಿಂ ಗೂಂಡಾಗಳು ನಡೆಸುತ್ತಿರುವ ಹಲ್ಲೆಗಳಿಗೆ ಹಿಂದೂ ಯುವಕರು ಪ್ರತಿಯಾಗಿ ಹಲ್ಲೆ ನಡೆಸಲಾರಂಭಿಸಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಮೊನ್ನೆಯಷ್ಟೇ ಹರ್ಷನನ್ನು ಕಳೆದುಕೊಂಡು ಹಿಂದೂ ಯುವಕರು ರೋಷದಿಂದ ಕುದಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ನಾಯಕರು ಗೂಂಡಾ ಎಲಿಮೆಂಟ್​ಗಳನ್ನು ಹದ್ದು ಬಸ್ತಿನಲ್ಲಿಡಬೇಕು. ಇಲ್ಲದಿದ್ರೆ ಅಂತವರನ್ನು ಗುರುತಿಸಿ ಹಿಡಿದು ಸರ್ಕಾರದ ವಶಕ್ಕೆ ಕಕೊಡಬೇಕು ಎಂದು ಈಶ್ವರಪ್ಪ ಹೇಳಿದರು.

Edited By : Nagaraj Tulugeri
PublicNext

PublicNext

05/03/2022 11:03 pm

Cinque Terre

67.02 K

Cinque Terre

44

ಸಂಬಂಧಿತ ಸುದ್ದಿ