ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'25 ವರ್ಷಗಳಿಂದ ನಾವೇ ಆಹಾರ ನೀಡಿದ ಹಾವು, ಈಗ ನಮ್ಮನ್ನೇ ಕಚ್ಚುತ್ತಿದೆ'

ಮುಂಬೈ: ನಾವು 25 ವರ್ಷಗಳಿಂದ ಆಹಾರ ನೀಡಿದ ಹಾವು ಈಗ ನಮ್ಮನ್ನು ಕಚ್ಚುತ್ತಿದೆ. ಆದರೆ ಈ ಹಾವನ್ನು ಹೇಗೆ ತುಳಿಯಬೇಕೆಂದು ನಮಗೆ ತಿಳಿದಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಬಜೆಟ್ ಅಧಿವೇಶನಕ್ಕೂ ಮುನ್ನ ಉದ್ಧವ್ ಠಾಕ್ರೆ ಅವರು ಮುಂಬೈನಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಶಾಸಕರು ಮತ್ತು ಮುಖಂಡರ ಜಂಟಿ ಸಭೆ ನಡೆಸಿದರು. ಈ ಸಭೆಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‍ಸಿಪಿ) ಮುಖ್ಯಸ್ಥ ಶರದ್ ಪವಾರ್ ಕೂಡ ಉಪಸ್ಥಿತರಿದ್ದರು.

ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿರುವುದನ್ನು ಉಲ್ಲೇಖಿಸಿ ಮಾತನಾಡಿದ ಉದ್ಧವ್ ಠಾಕ್ರೆ ಅವರು, 'ನಮ್ಮ ಮೇಲೆ ಆರೋಪ ಹೊರಿಸುವವರ ವಿರುದ್ಧ ತಲೆ ಎತ್ತಲು ನಾವು ಸಿದ್ಧರಿದ್ದೇವೆ' ಎಂದು ಕಿಡಿಕಾರಿದ್ದಾರೆ.

Edited By : Vijay Kumar
PublicNext

PublicNext

03/03/2022 02:57 pm

Cinque Terre

36.99 K

Cinque Terre

16

ಸಂಬಂಧಿತ ಸುದ್ದಿ