ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬಳೆ- ಕುಂಕುಮದ ಬಗ್ಗೆ ಮಾತ್ನಾಡ್ತೀರಾ, ನಿಮ್ಗೆ ನಾಚಿಕೆಯಾಗುವುದಿಲ್ವಾ? ಮುತಾಲಿಕ್ ಕಿಡಿ

ಹಾವೇರಿ: ಉಡುಪಿಯ ಕಾಲೇಜೊಂದರಲ್ಲಿ ಕೇವಲ 6 ಜನ ವಿದ್ಯಾರ್ಥಿನಿಯರಿಂದ ಆರಂಭವಾದ ಹಿಜಾಬ್ ವಿವಾದ ಇಂದು ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದೆ.

ಸದ್ಯ ತಾರಕಕ್ಕೇರಿದ ಗಲಾಟೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಹಿಂದೂ ವಿದ್ಯಾರ್ಥಿನಿಯರು ಕುಂಕುಮ, ಬಳೆ ಹಾಕಿಕೊಳ್ಳದಿದ್ದರೆ ನಾವು ಹಿಜಾಬ್ ಹಾಕಿಕೊಳ್ಳುವುದಿಲ್ಲ ಎಂದು ಸವಾಲ್ ಹಾಕಿದ್ದಾಳೆ. ಇದೇ ವಿಚಾರಕ್ಕೆ ಕಿಡಿಕಾರಿದ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್, 'ನಾಚಿಕೆಯಾಗುವುದಿಲ್ವಾ ನಿಮ್ಗೆ? ನಮ್ಮ ರಾಜ್ಯದಲ್ಲಿ ನಮ್ಮ ಸಂಸ್ಕೃತಿ ಆಚರಣೆಗೆ ಯಾರಪ್ಪನ ಅಪ್ಪನೆ ಬೇಕಿಲ್ಲ. ಗಣಪತಿ, ಸರಸ್ವತಿ ಪೂಜೆಯನ್ನು ನಾವು ಪಾಕಿಸ್ತಾನದಲ್ಲಿ ಮಾಡುತ್ತಿಲ್ಲ' ಎಂದು ಗುಡುಗಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಕಾನೂನು ಉಲ್ಲಂಘನೆ ಮಾಡುತ್ತಿರುವವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನಿನ್ನೆ ಮತ್ತು ಇವತ್ತು ನಮಗೆ ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಅಂತ ಎಲ್ಲರ ಬಾಯಲ್ಲಿ ಬರುತ್ತಿದೆ. ಹೈಕೋರ್ಟ್ ಮಧ್ಯಂತರ ಆದೇಶ ಧಿಕ್ಕರಿಸಿ ಸೊಕ್ಕಿನಿಂದ ಮಾತಾಡುತ್ತಿದ್ದಾರೆ. ಕಾಲೇಜುಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಇದೆ. ಆದರೂ ವಿದ್ಯಾರ್ಥಿಗಳು ಮಾತ್ರವಲ್ಲದೆ ಅವರ ಪೋಷಕರು, ಕಾಲೇಜು ಬಳಿ ಹೋಗಿ ಕಾನೂನು ಉಲ್ಲಂಘನೆ ಮಾಡಿ ಹಿಜಾಬ್ ಬಗ್ಗೆ ಮಾತಾಡ್ತಾರೆ. ಸರಕಾರ ಯಾಕೆ ಇಂಥವರ ಮೇಲೆ ಕ್ರಮ ಕೈಗೊಂಡಿಲ್ಲ ಕೂಡಲೇ ಸೂಕ್ತ ಕ್ರಮಕೈಗೊಳ್ಳಿ ಎಂದಿದ್ದಾರೆ.

Edited By : Shivu K
PublicNext

PublicNext

17/02/2022 06:33 pm

Cinque Terre

94.84 K

Cinque Terre

104

ಸಂಬಂಧಿತ ಸುದ್ದಿ