ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಸ್‌ವೈ ಮೊಮ್ಮಗಳು ಹೆರಿಗೆ ಬಳಿಕ ಖಿನ್ನತೆಯಿಂದ ಬಳಲುತ್ತಿದ್ರು: ಗೃಹ ಸಚಿವ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಅವರ ಸಾವಿನ ಬಗ್ಗೆ ಅನುಮಾನ ಪಡುವಂಥದ್ದು ಏನೂ ಅಲ್ಲ. ಅವರು ಖಿನ್ನತೆಯಿಂದ ಬಳಲುತ್ತಿದ್ದ ಸಂಗತಿ ನಮಗೆಲ್ಲ ಗೊತ್ತಿತ್ತು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಇಂಗ್ಲಿಷ್ ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಅವರು, 'ಸೌಂದರ್ಯ ಅವರನ್ನು ಮಾನಸಿಕ ಉತ್ತಮ ಸ್ಥಿತಿಗೆ ತರಲು ಯಡಿಯೂರಪ್ಪನವರು ಹಲವಾರು ಸಲ ಮನೆಗೆ ಕರೆದುಕೊಂಡು ಬಂದಿದ್ದರು. ಅವರಲ್ಲಿನ ಖಿನ್ನತೆಯನ್ನು ಓಡಿಸಲು ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಕುಟುಂಬದ ಬೇರೆ ಸದಸ್ಯರು ಸಹ ಪ್ರಯತ್ನಿಸುತ್ತಿದ್ದರು' ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

29/01/2022 09:27 am

Cinque Terre

111.42 K

Cinque Terre

1

ಸಂಬಂಧಿತ ಸುದ್ದಿ