ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು ರಂಗಾಯಣದಲ್ಲಿ 'ಇಸಂ' ಕಾದಾಟ: ಕಲಾವಿದರಿಗೆ ಸಂಕಷ್ಟ

ಮೈಸೂರು: ರಂಗಾಯಣದಲ್ಲಿ ಎಡ ಹಾಗೂ ಬಲ ಪಂಥೀಯರ ತಿಕ್ಕಾಟದಿಂದ ರಂಗಾಯಣ ಕಲಾವಿದರು ಹೈರಾಣಾಗಿದ್ದಾರೆ.

ಹೌದು ಕಳೆದ 15 ದಿನಗಳಿಂದ ರಂಗಾಯಣ ಸಂಪೂರ್ಣ ಪೊಲೀಸರ ಹಿಡಿತದಲ್ಲಿದೆ.ಕಾರಣ ಇಸಂ ಗುದ್ದಾಟ.ಇಂದು ರಂಗಾಯಣದ ಎದುರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಎಡಪಂಥೀಯ ಹಾಗೂ ಪ್ರಗತಿಪರ ಸಂಘಟನೆಗಳ ಪ್ರತಿಭಟನೆಗೆ ಪ್ರತಿಯಾಗಿ ನಡೆದ ಪ್ರತಿಭಟನೆ ಇದಾಗಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ದ ಪ್ರಗತಿಪರರು ಪ್ರತಿಭಟನೆ ನಡೆಸಿದ್ದರು. ಅಡ್ಡಂಡ ಕಾರ್ಯಪ್ಪಗೆ ಹಿಂದೂ ಪರ ಸಂಘಟನೆಗಳು ಬೆಂಬಲ ನೀಡಿ ಹೋರಾಟ ಮಾಡುತ್ತಿದ್ದಾರೆ.

ಪ್ರತಿಭಟನೆ ನಡೆಸದಂತೆ ತಡೆಯಲು ಡಿಸಿಪಿ ಸ್ಥಳಕ್ಕೆ ಆಗಮಿಸಿದಾಗ ಅವರ ಜೊತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದ್ದಾರೆ. ಪ್ರಗತಿಪರರ ಪ್ರತಿಭಟನೆಗೆ ಅವಕಾಶ ನೀಡಿ ತಮ್ಮನ್ನು ತಡೆಯಲು ಬಂದಿದ್ದಾರೆಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಪ್ರತಿಭಟನಾಕಾರರ ಆಕ್ರೋಶ ಶಮನ ಮಾಡಿ ಪೊಲೀಸರು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

30/12/2021 03:29 pm

Cinque Terre

43.25 K

Cinque Terre

0

ಸಂಬಂಧಿತ ಸುದ್ದಿ