ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿಗೆ ಹೊಸ ಕಾರು ಖರೀದಿ ಬೆಲೆ 12 ಕೋಟಿಯಲ್ಲ : 4 ಕೋಟಿ ಕೇಂದ್ರದ ಸ್ಪಷ್ಟನೆ

ಹೊಸದಿಲ್ಲಿ: ಪ್ರಧಾನಿ ಮೋದಿಯವರಿಗೆ ವಿಶೇಷ ಭದ್ರತಾ ಪಡೆ (ಎಸ್ಪಿಜಿ) ಶಿಫಾರಸಿನ ಅನ್ವಯ ಹೊಸ ಕಾರು ಒದಗಿಸಲಾಗಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಹೊಸ ಕಾರಿನ ಬೆಲೆ 12 ಕೋಟಿ ರೂ. ಎಂದು ಪ್ರಕಟವಾಗಿದೆ. ಅದು ಸರಿಯಾದ ಅಂಶವಲ್ಲ, ಬದಲಾಗಿ ಮೂರನೇ ಒಂದರಷ್ಟು (4 ಕೋಟಿ ರೂ.) ಎಂದು ಕೇಂದ್ರ ಸರಕಾರ ನೀಡಿದ ಸ್ಪಷ್ಟನೆಯಲ್ಲಿ ತಿಳಿಸಿದೆ.

ಪ್ರಧಾನಮಂತ್ರಿ ಪ್ರಯಾಣಿಸುವ ಕಾರುಗಳನ್ನು ಆರು ವರ್ಷಕ್ಕೊಮ್ಮೆ ಬದಲಾವಣೆ ಮಾಡಲಾಗುತ್ತದೆ. ಹಾಲಿ ಪ್ರಧಾನಿ ಅಧಿಕಾರಕ್ಕೆ ಬಂದ ಬಳಿಕ ಎಂಟು ವರ್ಷಗಳ ಕಾಲ ಹಲವು ಕಾರುಗಳನ್ನು ಬಳಕೆ ಮಾಡಲಾಗಿದೆ. ಹೀಗಾಗಿ, ಎಸ್ ಪಿಜಿ ಅವುಗಳ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಬಿಎಂಡಬ್ಲ್ಯೂ ಕಾರು ಬಳಕೆ ಮಾಡುವುದಕ್ಕೆ ಆಕ್ಷೇಪ ಮಾಡಿತ್ತು.

ಎಸ್ ಪಿಜಿ ತಾನು ರಕ್ಷಣೆ ನೀಡುವ ವ್ಯಕ್ತಿಗೆ ಇರುವ ಬೆದರಿಕೆಯ ತೀವ್ರತೆಗೆ ಅನುಗುಣವಾಗಿ ಹೊಸ ಕಾರು ಖರೀದಿ ಮಾಡುವ ಬಗ್ಗೆ ಸ್ವತಂತ್ರವಾಗಿ ನಿರ್ಧರಿಸಿ, ಕ್ರಮ ಕೈಗೊಳ್ಳುತ್ತದೆ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. ಜತೆಗೆ ದೇಶದ ಹಿತಾಸಕ್ತಿಯಿಂದ ಪ್ರಧಾನಿಗೆ ನೀಡಲಾಗಿರುವ ಹೊಸ ಕಾರಿನ ಭದ್ರತಾ ವಿವರಗಳ ಬಗ್ಗೆ ಚರ್ಚೆಯಾಗಿರುವುದಕ್ಕೂ ಸರಕಾರ ವಿಷಾದ ವ್ಯಕ್ತಪಡಿಸಿದೆ.

Edited By : Nirmala Aralikatti
PublicNext

PublicNext

30/12/2021 03:08 pm

Cinque Terre

57.51 K

Cinque Terre

5

ಸಂಬಂಧಿತ ಸುದ್ದಿ