ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಕರ್ನಾಟಕ ಬಂದ್ ಬಹುತೇಕ ಅನುಮಾನ-ಹೋರಾಟ ರ‍್ಯಾಲಿಗೆ ಸೀಮಿತ ಆಗೋ ಸಾಧ್ಯತೆ

ಬೆಂಗಳೂರು: ಎಂಇಎಸ್ ನಿಷೇಧಕ್ಕೆ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್,ಕರ್ನಾಟಕ ಬಂದ್ ಕರೆ ಏನೋ ಕೊಟ್ಟಿದ್ದಾರೆ. ಆದರೆ ಇದು ಸಕ್ಸಕ್ ಆಗೋದೇ ಡೌಟ್ ಇದೆ. ಕನ್ನಡ ಪರ ಸಂಘಟನೆಗಳಲ್ಲಿ ಕೆಲವು ಈ ಬಂದ್ ಗೆ ವಿರೋಧಿಸಿ ಹಿಂದೆ ಸರಿದು ಬಿಟ್ಟಿವೆ. ನಾಳೆ ಕರ್ನಾಟಕ ಬಂದ್ ಆಗೋದೇ ಡೌಟು.

ಕರ್ನಾಟಕ ಬಂದ್ ಕರೆ ಏನೋ ವಾಟಾಳ್‌ ನಾಗಾರಾಜ್ ಕೊಟ್ಟು ಬಿಟ್ಟಿದ್ದಾರೆ. ಆದರೆ ಈ ವಿಚಾರವಾಗಿ ಕನ್ನಡ ಪರ ಸಂಘಟನೆಗಳಲ್ಲಿಯೇ ಅಪಸ್ವರ ಇದೆ. ಪ್ರವೀಣ್ ಶೆಟ್ಟಿ ಬಣ ಈಗ ಬಂದ್ ಬೇಡವೇ ಬೇಡ ಅಂತ ಹೇಳಿ ಹಿಂದೆ ಸರಿದು ಬಿಟ್ಟಿದೆ. ನಾರಾಯಣ ಗೌಡರ ಸಂಘಟನೆಯಂತೂ ಈ ಬಂದ್ ಅನ್ನೇ ವಿರೋಧಿ ಪ್ರತಿಭಟೆನ ಮಾಡ್ತಿದೆ.

ಹೀಗಿರುವಾಗ ಬಂದ್ ಬೇಡ ಅಂತ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಕನ್ನಡ ಪರ ಸಂಘಗಳಿಗೆ ಕೇಳಿಕೊಂಡಿದ್ದಾರೆ.ಕೊರೊನಾ ದಿಂದ ಈಗಾಗಲೇ ಭಾರಿ ನಷ್ಟ ಆಗಿದೆ. ಬಂದ್ ಆದ್ರೇ ಮತ್ತೆ ತೊಂದರೆ ಆಗುತ್ತದೆ. ಎಂಇಎಸ್ ವಿರುದ್ಧ ಸರ್ಕಾರ ಕಾನೂನು ರೀತಿ ಕೆಲಸ ಮಾಡ್ತಿದೆ ಅಂತಲೇ ಹೇಳ್ತಿದೆ.

ಆದರೂ ವಾಟಾಳ್‌ ನಾಗಾರಾಜ್ ಬಣ ಬಂದ್ ಗೆ ಪಟ್ಟು ಹಿಡಿದೆ. ಇಂದು ಅದರ ರೂಪರೇಷಗಳನ್ನೂ ರೆಡಿ ಮಾಡಲಿದೆ. ಆದರೆ ಬಂದ್ ಕೇವಲ ಪ್ರತಿಭಟನಾ ರ‍್ಯಾಲಿ ಗೆ ಸೀಮತ ಆಗೋ ಸಾಧ್ಯತೆ ಇದೆ ಅನ್ನೋ ಮಾತು ಕೇಳಿ ಬರ್ತಿದೆ.

Edited By :
PublicNext

PublicNext

30/12/2021 12:23 pm

Cinque Terre

51.82 K

Cinque Terre

0

ಸಂಬಂಧಿತ ಸುದ್ದಿ