ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ, ಮಾಜಿ ಸಿಎಂ ನಡುವೆ ಮುಂದುವರಿದ ಶೀತಲ ಸಮರ: ಸಭೆಯಲ್ಲಿಯೇ ಹಿಂಗಾದರೇ ಹೆಂಗೆ !

ಹುಬ್ಬಳ್ಳಿ: ಬಿಜೆಪಿ ಪಕ್ಷದಲ್ಲಿ ನಾಯಕರ ಒಳ ಬೇಗುದಿ ಎಷ್ಟೋ ಶಮನ ಮಾಡಿದರು ಮಾತ್ರ ತಣ್ಣಗಾಗುತ್ತಿಲ್ಲ. ಎಲ್ಲವೂ ಸರಿ ಇದೆ ಎಂಬುವುದು ತೋರಿಕೆಗೆ ಮಾತ್ರವಾಗಿದ್ದು, ಏನು ಸರಿ ಇಲ್ಲಾ ಎಂಬುದು ಮೇಲ್ನೋಟಕ್ಕೆ ಸತ್ಯವಾಗಿದೆ.

ಹೌದು..ಹುಬ್ಬಳ್ಳಿ ಬಿಜೆಪಿ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಹಾಗೂ ಮಾಜಿ ಸಿಎಂ ವೈಮನಸ್ಸು ಮುಂದುವರಿದಿದೆ. ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಶೆಟ್ಟರ್ ನಡುವೆ ಶಿಥಲ್ ಸಮರ ಮುಂದುವರೆದಿದೆ.

ಕಾರ್ಯಕ್ರಮದಲ್ಲಿ ಸಿಎಂ ಆಗಮಿಸುತ್ತಿದ್ದಂತೆ ಸಿಎಂ ಕಡೆಗೆ ಎಲ್ಲ ಸಚಿವರು ನೋಡಿದರೂ ಕೂಡ ಜಗದೀಶ್ ಶೆಟ್ಟರ್ ತಿರುಗಿ ನೋಡದೆ ಮೌನ ತಾಳಿದರು. ಎಲ್ಲಾ ಸಚಿವರು ಸಿಎಂಗೆ ನಮಸ್ಕಾರ ಮಾಡಿದ ಸಂದರ್ಭದಲ್ಲಿ ಮಾಜಿ ಸಿಎಂ ಶೆಟ್ಟರ್ ಮೌನ ವಹಿಸಿದ್ದು, ಮಾತ್ರವಲ್ಲದೆ ಆ ಕಡೆಗೆ ತಿರುಗಿ ಕೂಡ ನೋಡದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Edited By :
PublicNext

PublicNext

29/12/2021 08:58 am

Cinque Terre

38.62 K

Cinque Terre

16

ಸಂಬಂಧಿತ ಸುದ್ದಿ