ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿಗೆ ಸುಮಾರು ದಿನಗಳಿಂದ ಮಂಡಿ ನೋವು ಕಾಡುತ್ತಿದೆ. ಅವರು ಇದಕ್ಕಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲು ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ. ಅವರು ಚಿಕಿತ್ಸೆ ಪಡೆದರೆ ಕನಿಷ್ಟ ಮೂರು ತಿಂಗಳು ವಿಶ್ರಾಂತಿ ಪಡೆಯಬೇಕಾಗುತ್ತದೆ. ಹೀಗಾಗಿ ಸಿಎಂ ಬದಲಾವಣೆ ವಿಚಾರವಾಗಿ ಪಕ್ಷದೊಳಗಿನ ಕೆಲವರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಹಾಗೂ ಅವರನ್ನು ಕೆಳಗಿಳಿಸುವಂತೆ ಪಕ್ಷದ ವರಿಷ್ಟರು ಸೂಚಿಸಲಾಗಿದೆ ಎನ್ನಲಾಗಿದೆ.
ಮುಖ್ಯಮಂತ್ರಿಗಳು ಶಸ್ತ್ರಚಿಕಿತ್ಸೆಗೆ ಅಮೆರಿಕಾಗೆ ಹೋಗುವುದು ಕನ್ಫರ್ಮ್ ಆಗಿದೆಯಾ ಸರ್ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ಅಶೋಕ್, "ಮುಖ್ಯಮಂತ್ರಿಗಳ ಮಂಡಿ ನೋವಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. ಅವರು ಅಮೆರಿಕಾಗೆ ಹೋಗುತ್ತಿದ್ದಾರೆ ಎನ್ನುವುದು ಕಪೋಕಲ್ಪಿತ ಸುದ್ದಿಯೇ ಹೊರತು ಇದರಲ್ಲಿ ನಿಜಾಂಶವಿಲ್ಲ"ಎಂದಿದ್ದಾರೆ.
PublicNext
25/12/2021 06:37 pm