ಬೆಳಗಾವಿ:ರಾಜ್ಯ ಸರ್ಕಾರ ಈಗ ವರ್ಷಾಚರಣೆಯ ಸಂಭ್ರಮಕ್ಕೆ 50-50 ನಿಯಮ ಜಾರಿಗೊಳಿಸಿದೆ.ಹೋಟೆಲ್ ಹಾಗೂ ಪಬ್,ಕ್ಲಬ್ ಗಳಲ್ಲಿ ಶೇಕಡ 50 ರಷ್ಟು ಜನ ಇರುವಂತೆ ನೋಡಿಕೊಳ್ಳಲೇಬೇಕು ಅಂತಲೇ ಸಿಎಂ ಬಸವರಾಜ್ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ.
ಹೋಟೆಲ್ ಮಾಲೀಕರು ಮತ್ತು ಪೊಲೀಸರ ನಡುವೆ ಯಾವುದೇ ಗೊಂದಲ್ಲ ಬೇಡವೇ ಬೇಡ. ಕ್ಲಬ್ ,ಪಬ್ ಮತ್ತು ಹೋಟೆಲ್ ಗಳಲ್ಲಿ 50-50 ಕೋವಿಡ್ ನಿಯಮವೇ ಜಾರಿ ಆಗಿರುತ್ತದೆ.
ರಾಜ್ಯದಲ್ಲಿ ಒಮಿಕ್ರಾನ್ ಕೇಸ್ ಹೆಚ್ಚಾಗುತ್ತಲೇ ಇವೆ. ಗುರುವಾರದ ಹೊತ್ತಿಗೆ 12 ಪ್ರಕರಣಗಳು ಪತ್ತೆ ಆಗಿವೆ. ಒಟ್ಟು ಲೆಕ್ಕದಂತೆ 31 ಕೇಸ್ ರಾಜ್ಯದಲ್ಲಿ ಪತ್ತೆ ಆಗಿವೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು ಅಂತ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
PublicNext
25/12/2021 07:25 am