ಗದಗ: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿರುವ ಗದಗ-ಬೇಟಗೇರಿ ನಗರಸಭೆ ಚುನಾವಣೆ ಬಿಜೆಪಿ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈಗಾಗಲೇ ಭಾರತೀಯ ಜನತಾ ಪಕ್ಷ ಧಾರವಾಡ ವಿಭಾಗದ ನಾಯಕರನ್ನು ಗದಗ-ಬೇಟಗೇರಿಯತ್ತ ಕೈ ಮಾಡಿ ಕರೆದಿದ್ದು, ಗೆಲ್ಲುವ ಛಲವನ್ನು ತೊಟ್ಟಿದೆ.
ಹೌದು.. ಗದಗ-ಬೇಟಗೇರಿ ನಗರಸಭೆ ಚುನಾವಣೆಗೆ ಹುಬ್ಬಳ್ಳಿಯ ಬಿಜೆಪಿಯ ಮುಖಂಡರು ಹಾಗೂ ಧಾರವಾಡ ವಿಭಾಗದ ಮತ್ತು ನಗರಸಭೆ ಚುನಾವಣೆ ಉಸ್ತುವಾರಿಯಾಗಿ ನಾರಾಯಣ ಜರತಾರಘರ ಹುಬ್ಬಳ್ಳಿಯಿಂದ ಗದಗ-ಬೇಟಗೇರಿಗೆ ಆಗಮಿಸಿದ್ದು, ಬಿಜೆಪಿಯಲ್ಲಿ ಮತ್ತಷ್ಟು ಪಕ್ಷ ಸಂಘಟನೆ ಹಾಗೂ ಅಭ್ಯರ್ಥಿಗಳ ಗೆಲುವಿಗೆ ರೂಪುರೇಷೆಗಳನ್ನು ಸಿದ್ಧ ಪಡಿಸುತ್ತಿದ್ದಾರೆ.
ಈಗಾಗಲೇ ಗದಗ-ಬೇಟಗೇರಿ ನಗರಸಭೆ ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ನೇತೃತ್ವದಲ್ಲಿ ಸಭೆ ನಡೆಸುತ್ತಿರುವ ಧಾರವಾಡ ವಿಭಾಗ ಮತ್ತು ನಗರಸಭೆ ಚುನಾವಣೆ ಉಸ್ತುವಾರಿ ನಾರಾಯಣ ಜರತಾರಘರ ಸಾಕಷ್ಟು ಶ್ರಮವನ್ನು ವಹಿಸುವ ಮೂಲಕ ಪ್ರಚಾರದ ಬಗ್ಗೆ ಹಾಗೂ ಮತದಾರರನ್ನು ಮನವೊಲಿಸುವ ಕುರಿತು ಸಾಕಷ್ಟು ಪ್ರಯತ್ನವೊಂದನ್ನು ಮಾಡುತ್ತಿರುವುದು ಸ್ಥಳೀಯ ಚುನಾವಣೆಯಲ್ಲಿ ಸಂಚಲನ ಸೃಷ್ಟಿಸಿದೆ.
PublicNext
22/12/2021 03:43 pm