ಬೆಂಗಳೂರು:ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೌನವಾಗಿಯೇ ರಾಜಕಾರಣ ಮಾಡುತ್ತಿದ್ದಾರೆ. ಯಾವುದೇ ರೀತಿಯ ಹೇಳಿಕೆಗಳನ್ನೂ ಕೊಡುತ್ತಿಲ್ಲ. ಎಲ್ಲವೂ ಹೆಚ್ಚು ಮಾತನ್ನೂ ಆಡೋದಿಲ್ಲ. ತಾವಾಯಿತು ತಮ್ಮ ಕೆಲಸ ಆಯಿತು ಅಂತಲೇ ಇದ್ದಾರೆ. ಇದಕ್ಕೆ ಕಾರಣ ಇದೆ. ಅದೇನು ಗೊತ್ತೇ .ಅತೀ ಶೀಘ್ರದಲ್ಲಿಯೆ ರಾಜ್ಯದಲ್ಲಿ ಶೋಭಾ ಅವರಿಗೆ ಅತಿ ದೊಡ್ಡ ಹುದ್ದೆ ಸಿಗಲಿದೆ ಅನ್ನೋ ಮಾತು.
ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ಶೋಭಾ ಕರಂದ್ಲಾಜೆ ಅವರು ಎಲ್ಲೂ ಹೆಚ್ಚು ಅಬ್ಬರಿಸುತ್ತಲೇ ಇಲ್ಲ. ಅವರಾಯಿತು ಅವರ ಕೆಲಸ ಆಯಿತು ಅಂತಲೇ ಇದ್ದಾರೆ. ಹೀಗೆ ಮೌನವಾಗಿ ಕೆಲಸ ಮಾಡ್ತಾಯಿರಿ ಎಂದು ಹೈಕಮಾಂಡ್ ಶೋಭಾ ಅವರಿಗೆ ಸೂಚನೆ ಕೊಟ್ಟಿದೆ ಅಂತೆ. ಅದಕ್ಕೆ ಶೋಭಾ ಅವ್ರು ಮೌನ ಕಾರ್ಯಾಚಾರಣೆ ಮುಂದುವರೆಸಿದ್ದಾರೆ.
ರಾಜ್ಯದಲ್ಲಿ ದೊಡ್ಡ ಹುದ್ದೆ ಯಾವುದು? ಗೊತ್ತಿಲ್ಲ. ಆದರೆ ಈಗ ಇದೇ ಚರ್ಚೆ ಆಗುತ್ತಿದೆ. ವೆಟ್ ಸೈಟ್ ಗಳಲ್ಲೂ ಇದೇ ಸುದ್ದಿನೇ ಹೆಚ್ಚು ಸೌಂಡ್ ಮಾಡುತ್ತಿದೆ.
PublicNext
20/12/2021 07:51 am