ಬೆಂಗಳೂರು: ಬೆಳಗಾವಿಯ ಎಂಇಎಸ್ ಪುಂಡಾಟಿಕೆಯನ್ನ ಕನ್ನಡ ಹೋರಾಟಗಾರ ವಾಟಾಳ್ ನಾಗಾರಾಜ್ ತೀವ್ರವಾಗಿಯೇ ಖಂಡಿಸಿದ್ದಾರೆ. ಬೆಳಗಾವಿಯ ರಾಜಕಾರಣಿಗಳು ಅಂತೂ ಮರಾಠರ ಏಜೆಂಟ್‌ಗಳೇ ಆಗಿದ್ದಾರೆ ಎಂದು ವಾಟಾಳ್ ಟೀಕಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಡಿಕೆ ಇಂದು ನಿನ್ನೆಯದಲ್ಲ. ಇದು ನಡೀತಾನೇ ಇದೆ. ಆದರೆ, ಬೆಳಗಾವಿಯ ರಾಜಕಾರಣಿಗಳು ಮರಾಠರ ಏಜೆಂಟಗಳಾಗಿಯೇ ಹೋಗಿದ್ದಾರೆ ಎಂದೇ ಸಿಟ್ಟು ಹೊರಹಾಕಿದ್ದಾರೆ.
ಉದ್ಭವ ಠಾಕ್ರೆ ವಿರುದ್ಧ ನಾಳೆ ರಾಮನಗರದಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ. ಬೆಳಗಾವಿಯಲ್ಲಿ ಪುಂಡಾಡಿಕೆ ಮೆರೆದವರನ್ನ ಸರ್ಕಾರ ಹಿಡಿದು ಜೈಲಿಗೆ ಹಾಕಬೇಕು ಅಂತಲೂ ಆಗ್ರಹಿಸಿದ್ದಾರೆ.
PublicNext
18/12/2021 09:35 am