ಜೈಪುರ(ರಾಜಸ್ಥಾನ): 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಂದ್ರದ ಮೋದಿ ಸರ್ಕಾರ ಪದೇ ಪದೇ ಕೇಳುತ್ತಿದೆ. ಆದ್ರೆ ನನ್ನ ಪ್ರಶ್ನೆ '70 ವರ್ಷಗಳ ಹಳಿ ಬಿಡಿ, ಏಳು ವರ್ಷದಲ್ಲಿ ನೀವು ಏನು ಮಾಡಿದ್ದೀರಿ ಹೇಳಿ' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಜೈಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, 70 ವರ್ಷಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆಯೋ ಅದನ್ನೆಲ್ಲ ಬಿಜೆಪಿ ಸರ್ಕಾರ ಮಾರಾಟ ಮಾಡಲು ಬಯಸುತ್ತಿದೆ. ನಮ್ಮಲ್ಲಿ ಎರಡು ರೀತಿಯ ಸರ್ಕಾರಗಳಿವೆ. ಜನರ ಸೇವೆ, ಸಮರ್ಪಣೆ ಮತ್ತು ಸತ್ಯದ ಬಗ್ಗೆ ಮಾತನಾಡುವುದು ಸರ್ಕಾರದ ಗುರಿಯಾಗಿದೆ. ಸುಳ್ಳು, ದುರಾಸೆ ಮತ್ತು ಲೂಟಿಯೇ ಗುರಿಯಾಗಿರುವ ಸರಕಾರ ಕೂಡಾ ಇದೆ. ಈಗಿನ ಕೇಂದ್ರ ಸರಕಾರದ ಗುರಿ ಸುಳ್ಳು, ದುರಾಸೆ ಮತ್ತು ಲೂಟಿಯಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
PublicNext
13/12/2021 08:10 am