ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ ಚಿತ್ರ ಈಗ ಕಾಂಗ್ರೆಸ್ ನತ್ತ ಹರಿದಂತೆ ಕಾಣುತ್ತಿದೆ. ವಿಧಾನ ಪರಿಷತ್ ಚುನಾವಣೆ ಪ್ರಚಾರದಲ್ಲಿ ಜೆಡಿಎಸ್ ಪಕ್ಷವನ್ನ ಟಾರ್ಗೆಟ್ ಮಾಡಿದ್ದ ಕೆ.ಸಿ.ನಾರಾಯಣ ಗೌಡರು, ಪ್ರಚಾರದಲ್ಲಿ ಕಾಂಗ್ರೆಸನ್ನ ಒಂಚೂರು ಟೀಕಿಸಲಿಲ್ಲ.
ಹೌದು. ವಿಧಾನಪರಿಷತ್ ಚುನಾವಣೆ ಕಣ ಬಿಜೆಪಿಗಷ್ಟೇ ಅಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡರಿಗೂ ಮಹತ್ವದ್ದೇ ಆಗಿತ್ತು.
ಆದರೆ ಕೆ.ಸಿ.ನಾರಾಯಣ ಗೌಡರು ಈ ವೇಳೆ ಜೆಡಿಎಸ್ ಅನ್ನ ಟಾರ್ಗೆಟ್ ಮಾಡಿಯೇ ಮಾನಾಡಿದ್ದರು. ಹೊರತು ಕಾಂಗ್ರೆಸ್ ಅನ್ನ ಹೆಚ್ಚು ಟೀಕಿಸೋ ಕೆಲಸ ಮಾಡಲೇ ಇಲ್ಲ. ಅದೇ ಕಾರಣಕ್ಕೆ ಈಗ ಕೆ.ಸಿ.ನಾರಾಯಣಗೌಡರ ಒಲವು ಕಾಂಗ್ರೆಸ್ ನತ್ತ ವಾಲಿದೆ ಅನ್ನೋ ಮಾತು ಈಗ ಹೆಚ್ಚು ಕೇಳಿ ಬರುತ್ತಿದೆ. ಅಷ್ಟೆ.
PublicNext
11/12/2021 03:37 pm