ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯ ಹೆಸರನ್ನು ಪಾಕಿಸ್ತಾನದಲ್ಲಿ ಹೇಳಬಹುದಷ್ಟೇ: ಸಿ.ಟಿ ರವಿ

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಹೋದ ಕಡೆಯೆಲ್ಲ ಮೋದಿ… ಮೋದಿ… ಎಂದು ಹೇಳುತ್ತಾರೆ, ಆದರೆ ಸಿದ್ದರಾಮಯ್ಯ ಹೆಸರನ್ನು ಯಾರು ಹೇಳುತ್ತಾರೆ? ಸಿದ್ದರಾಮಯ್ಯ ಅವರ ಹೆಸರನ್ನು ಪಾಕಿಸ್ತಾನದಲ್ಲಿ ಯಾರಾದರೂ ಹೇಳಬಹುದಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಹೋದ ಕಡೆಯೆಲ್ಲ ಮೋದಿ…ಮೋದಿ… ಎಂದು ಹೇಳುತ್ತಾರೆ, ಆದರೆ ಸಿದ್ದರಾಮಯ್ಯ ಹೆಸರನ್ನು ಯಾರು ಹೇಳುತ್ತಾರೆ. ಒನ್ ಸನ್, ಒನ್ ಮೂನ್, ಒನ್ ವಲ್ಡ್ ಒನ್ ನರೇಂದ್ರ ಮೋದಿ’ ಎಂದಿದ್ದಾರೆ. ಇಸ್ರೇಲ್ ಅಧ್ಯಕ್ಷ ನಮ್ಮ ದೇಶದಲ್ಲಿ ನನಗಿಂತ ಜನಪ್ರಿಯರೆಂದರೆ ನರೇಂದ್ರ ಮೋದಿ ಎಂದಿದ್ದಾರೆ. ಕರ್ನಾಟಕದಿಂದ ಹೊರ ಹೋದರೆ ಸಿದ್ದರಾಮಯ್ಯನವರ ಹೆಸರನ್ನು ಯಾರು ಹೇಳುತ್ತಾರೆ ಎಂದು ಲೇವಡಿ ಮಾಡಿದರು. ನಾನು ಹೇಗಿದ್ದೇನೋ ಅದೇ ರೀತಿ ಉಳಿದವರು ಎಂದು ಭಾವಿಸುತ್ತಾರೆ ಎಂದು. ಆದರೆ, ಜಗತ್ತಿನ ದೃಷ್ಟಿಯಲ್ಲಿ ನರೇಂದ್ರ ಮೋದಿ ಓರ್ವ ಅಗ್ರಗಣ್ಯ ನಾಯಕ ಎಂದು ಹೇಳಿದರು.

Edited By : Nagaraj Tulugeri
PublicNext

PublicNext

08/12/2021 10:23 pm

Cinque Terre

53.78 K

Cinque Terre

12

ಸಂಬಂಧಿತ ಸುದ್ದಿ