ಬಾಗಲಕೋಟೆ: ವಿಧಾನ ಪರಿಷತ್ ವಿಪಕ್ಷ ನಾಯಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಸ್.ಆರ್ ಪಾಟೀಲ್ ಅವರಿಗೆ ಪರಿಷತ್ ಚುನಾವಣೆ ಟಿಕೆಟ್ ಕೈ ತಪ್ಪಿದ ವಿಚಾರವಾಗಿ ಸಚಿವ ಗೋವಿಂದ್ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್.ಆರ್ ಪಾಟೀಲರಿಗೆ ಟಿಕೆಟ್ ನೀಡದೇ ಅವಮಾನ ಮಾಡಿದ್ದಾರೆ. ಅವರು ಒಬ್ಬ ಹಿರಿಯ ರಾಜಕಾರಣಿ. ಸಜ್ಜನ ಸುಸಂಸ್ಕೃತ ಮನುಷ್ಯ. ನಾಲ್ಕು ಬಾರಿ ಗೆದ್ದಿದ್ದಾರೆ. ಹಾಲಿ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಸ್ಥಾನದಲ್ಲಿದ್ದಾರೆ. ಸದನದಲ್ಲೂ ಉತ್ತಮ ಚಟುವಟಿಕೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಪಾಟೀಲ್‌ಗೆ ಟಿಕೆಟ್ ಕೊಡದೇ ಇರುವುದು ಅವರ ಪಕ್ಷದ ಆಂತರಿಕ ವಿಚಾರವಾಗಿದ್ರೂ ನಮ್ಮ ಅಖಂಡ ಜಿಲ್ಲೆಯ ಜನತೆಗೆ ನೋವಾಗಿದೆ. ಕಾಂಗ್ರೆಸ್ ಮೇಲೆ ಇದರ ಪರಿಣಾಮ ಬಿದ್ದೇ ಬೀಳುತ್ತೆ ಎಂದು ಕಾರಜೋಳ ಹೇಳಿದ್ದಾರೆ.
PublicNext
01/12/2021 07:42 am