ಕೊಪ್ಪಳ: ಬಿಟ್ ಕಾಯಿನ್ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಬಿಟ್ ಕಾಯಿನ್ ಬಗ್ಗೆ ಸರಿಯಾಗಿ ತನಿಖೆ ಮಾಡಿದ್ದರೆ ಎಲ್ಲಾ ಅಂದೇ ಬಹಿರಂಗ ಆಗುತ್ತಿತ್ತು. ಅವತ್ತು ನೀವು ಯಾರನ್ನು ಬಿಟ್ಟಿದ್ರಿ ಅವರನ್ನು ಈಗ ನಾವು ಅರೆಸ್ಟ್ ಮಾಡಿದ್ದೇವೆ. ಅವರ ಮೇಲೆ ಮೂರು ಕೇಸ್ ಹಾಕಿದ್ದೇವೆ. ನನದು ಒಂದೇ ಒಂದು ಪ್ರಶ್ನೆ ನೀವು ಯಾಕೆ ಬಿಟ್ರಿ. ಬಿಡೋರು ನೀವು ಹಿಡಿಯೋರು ನಾವು. ನಮ್ಮ ನೀತಿ ಸ್ಪಷ್ಟವಾಗಿದೆ. ಯಾರೇ ಇದ್ರೂ ಎಷ್ಟೇ ದೊಡ್ಡವರು ಇದ್ರೂ ನಾವು ಕ್ರಮ ಕೈಗೊಳ್ಳುತ್ತೇವೆ. ಮುಲಾಜಿಲ್ಲದೆ ನಾವು ಕ್ರಮ ಕೈಗೊಳ್ತೀವಿ. ಯಾರ್ಯಾರು ಅವರ ಜೊತೆ ಹಗಲು-ರಾತ್ರಿ ಕಳೆದಿದ್ದಾರೆ ಎಲ್ಲವೂ ಬಹಿರಂಗ ಆಗಲಿದೆ. ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ ಎಂದು ಗುಡುಗಿದರು.
'ನಾನು ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟಿರಲಿಲ್ಲ. ಯಾರ ಬಳಿಯೂ ಮಾತನಾಡಿಯೂ ಇರಲಿಲ್ಲ. ಹಿರಿಯರು ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಗಗೆ ಜವಾಬ್ದಾರಿ ಕೊಟ್ಟಿದ್ದಾರೆ. ಸುರಕ್ಷಿತ ನಾಡು ಕಟ್ಟೊದು ನನ್ನ ಜವಾಬ್ದಾರಿ. ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಬದುಕು ಕಟ್ಟಿಕೊಳ್ಳಲು ಎಲ್ಲ ರೀತಿಯ ಸೌಲಭ್ಯ ಕೊಡಬೇಕು ಎನ್ನುವುದು ನನ್ನ ಆಸೆ' ಎಂದರು.
PublicNext
19/11/2021 11:16 am