ತುಮಕೂರು: ಬಿಟ್ ಕಾಯಿನ್ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಈಗಾಗಲೆ ತನಿಖೆಗೆ ಆದೇಶ ನೀಡಿದ್ದಾರೆ.ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮತೆಗೆದುಕೊಳ್ಳಲಾಗುವುದು.ಹಾಗಂತ ನಾನು ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಅಂತ ಹೇಳೊಕೆ ಹೋಗಿದಿಲ್ಲ. ಯಾರೇ ಇದ್ದರೂ ಸರಿಯೇ ಅವರ ಮೇಲೆ ಕ್ರಮ ಜರುಗಲಿ ಅಂತಲೇ ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಿಟ್ ಕಾಯಿನ್ ವಿಚಾರ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ಬಂದಿದೆ. ಖಂಡಿತ ಇದು ಬಹಳ ಪ್ರಮುಖವಾದ ಪ್ರಕರಣವೇ ಆಗಿದೆ. ಹಾಗಂತ ಸುಮ್ನೆ ಬಿಡೋಕೆ ಆಗೋದಿಲ್ಲ.ತಪ್ಪು ಮಾಡಿದವರ ವಿರುದ್ಧ ಬಿಗಿಯಾದ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ ಯಡಿಯೂರಪ್ಪ.
ಜಗದೀಶ್ ಶೆಟ್ಟರ್ ಅವ್ರು ತಮ್ಮ ವೈಯಕ್ತಿಕ ಕೆಲಸ ನಿಮ್ಮಿತ್ತ ದೆಹಲಿಗೆ ಹೋಗಿದ್ದಾರೆ ಅಷ್ಟೆ. ಬೇರೆ ಕಾರಣ ಏನೂ ಇಲ್ಲ.ಹಾಗೇನೆ ಸಿಎಂ ಬದಲಾವಣೆ ಮಾತು ಇಲ್ಲವೇ ಇಲ್ಲ. ಬಸವರಾಜ್ ಬೊಮ್ಮಾಯಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರೇ ಮುಂದುವರಿಯುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
PublicNext
12/11/2021 09:31 pm