ದಾವಣಗೆರೆ: ಬಿಟ್ ಕಾಯಿನ್ ವಿಚಾರ ಇದು ಬಸವರಾಜ್ ಬೊಮ್ಮಾಯಿ ಸಿಎಂ ಆದ ಬಳಿಕ ಆದ ಘಟನೆ ಅಲ್ಲ.ಮೂರು ನಾಲ್ಕು ವರ್ಷಗಳ ಹಿಂದಿನ ಘಟನೆ. ಮೇಲಾಗಿ ಸದ್ಯ ವಿಧಾನ ಪರಿಷತ್ ಚುನಾವಣೆ ಘೋಷಣೆ ಆಗಿದೆ.ಈ ಹಿನ್ನೆಲೆ ಪ್ರತಿಪಕ್ಷಗಳಿಗೆ ಒಂದು ವಿಚಾರ ಬೇಕಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ.
ಸದ್ಯ ವಿಧಾನ ಪರಿಷತ್ ಚುನಾವಣೆ ಘೋಷಣೆ ಆಗಿದೆ.ಈ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸೋ ರೀತಿಯಲ್ಲಿ ಆರೋಪಗಳು ನಡೆದಿವೆ.ವಿಶೇಷವಾಗಿ ಬಿಟ್ ಕಾಯಿನ್ ವಿಚಾರದ ಬಗ್ಗೆ ಸಿಎಂ ಅವರು ದೆಹಲಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಮೇಲಾಗಿ ವಿಚಾರಣೆ ಈಗ ನಡೆಯುತ್ತಿದೆ.ಯಾರು ತಪ್ಪು ಮಾಡಿದ್ದಾರೆ ಎಂಬುದು ಸ್ಪ ಷ್ಟ ಆಗುತ್ತದೆ. ಸತ್ಯ ಎನು ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ ರಾಘವೇಂದ್ರ.
PublicNext
11/11/2021 11:35 am