ನವದೆಹಲಿ : ಬೆಲೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದ್ದ ಕೇಂದ್ರ ಪರಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಕೆ ಮಾಡಿರುವುದು ಮಾನವೀಯತೆಯಿಂದಲ್ಲ. ಬದಲಾಗಿದೆ ಭಯದಿಂದ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.
ದೀಪಾವಳಿ ಹಬ್ಬದ ಗಿಫ್ಟ್ ಎಂದು ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 5 ರೂ. ಹಾಗೂ ಡಿಸೇಲ್ ಮೇಲೆ 10 ರು. ಅಬಕಾರಿ ಸುಂಕ ಕಡಿತ ಮಾಡಿದೆ. ಇದು ಹೃದಯದಿಂದ ತೆಗೆದುಕೊಂಡಿರುವ ನಿರ್ಧಾರವಲ್ಲ, ಹೆದರಿಕೆಯಿಂದ ಎಂದು ಹೇಳಿದ್ದಾರೆ. ಯೇ ದಿಲ್ ಸೇ ನಹಿ, ಡರ್ ಸೇ ಎಂದು ಟ್ವೀಟ್ ಮಾಡಿರುವ ಪ್ರಿಯಾಂಕಾ ಜನರನ್ನು ಲೂಟಿ ಮಾಡುತ್ತಿರುವ ವಸೂಲಿ ಸರ್ಕಾರಕ್ಕೆ ಮುಂದಿನ ಚುನಾವಣೆಗಳಲ್ಲಿ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡಿಸೇಲ್ ಲೀಟರ್ ಗೆ ನೂರು ರು. ಗಳ ಗಡಿ ದಾಟಿ ತಿಂಗಳುಗಳೇ ಕಳೆದಿದ್ದವು. ಇದರ ಜತೆಗೆ ಎಲ್ ಪಿಜಿಯೂ ದುಬಾರಿ ಈಗ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡಿರುವುದರಿಂದ ಬೆಲೆ ಇಳಿದಿದೆ.
PublicNext
04/11/2021 03:54 pm