ಬೆಂಗಳೂರು: ಹಾನಗಲ್ ಉಪಚುನಾವಣೆಯಲ್ಲಿ ಸಿ.ಎಂ ಉದಾಸಿಯವರ ಬೇಸ್ ಮುಂದುವರೆಸಲು ಸ್ವಲ್ಪ ಮಟ್ಟಿಗೆ ಆಗಲಿಲ್ಲ ಎನ್ಉವ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಗೆ ತೆರರಳುವ ಮುನ್ನ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ ನಾಯಕರು, ಕಾರ್ಯಕರ್ತರು ಹಾಗೂ ಮತ ನೀಡಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.
ಫಲಿತಾಂಶ ವಿಚಾರದಲ್ಲಿ ವ್ಯಾಖ್ಯಾನ ಸಹಜ. ಒಂದು ಕಡೆ ಸೋಲಾಗಿದೆ ಮತ್ತೊಂದು ಕಡೆ ಗೆಲುವು ನಮ್ಮದಾಗಿದೆ. ಸೋಲು ಗೆಲುವು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಸೋಲಿನ ಅಂತರವನ್ನು ಸಾಧಿಸಬಹುದಿತ್ತು ನಾವು ಸೋಲಿನ ಕಾರಣಗಳನ್ನು ಮುಂದಿನ ದಿನಗಳಲ್ಲಿ ಆತ್ಮವಿಮರ್ಶೆ ಮಾಡಿ ಸರಿಪಡಿಸಿಕೊಳ್ಳುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಕೋವಿಡ್ ವೇಳೆ ಜನರ ಪರ ಕೆಲಸ ಮಾಡಿದ್ದರು ಎನ್ನುವ ಭಾವನೆ ಜನರಲ್ಲಿತ್ತು
ಇವೆರಡು ನಮ್ಮ ಸೋಲಿಗೆ ಕಾರಣಗಳು ಎಂದು ಬೊಮ್ಮಾಯಿ ಹೇಳಿದರು.
ನಾಳೆ ಸಿಎಂ ಹುದ್ದೆಗೇರಿ ನೂರು ದಿನವಾದ ಬಗ್ಗೆ ಮಾತನಾಡಿದ ಸಿಎಂ, ನೂರು ದಿನ ಅನ್ನೋದು ವಿಶೇಷ ಅಲ್ಲ ನೂರು ದಿನಗಳಲ್ಲಿ ಏನು ಮಾಡಿದೀವಿ ಅನ್ನೋದು ಮುಖ್ಯ. ಏನು ಕೆಲಸ ಮಾಡಿದೀವಿ ಅಂತ ತಿಳಿಸುವ ಕೆಲಸ ಮಾಡುತ್ತೇವೆ. ನೂರು ದಿನಗಳಲ್ಲಿ ನಮ್ಮ ಅಭಿವೃದ್ಧಿ, ಸವಾಲುಗಳ ಬಗ್ಗೆ ಜನರಿಗೆ ಸ್ಥೂಲ ಮಾಹಿತಿ ಕೊಡುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
PublicNext
03/11/2021 12:18 pm