ಬೆಂಗಳೂರು: ಮುಂಬರುವ ಸಿಂದಗಿ, ಹಾನಗಲ್ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಬಿಜೆಪಿ ಆಕ್ರಮ ಮಾಡ್ತಿದೆ. 5, 10 ಸಾವಿರ ರೂ ಹಣ ಹಂಚಿಕೆಮಾಡ್ತಿದ್ದಾರೆ ಎಂದು ಹಣ ಹಂಚಿಕೆಯ ವಿಡಿಯೋ ವನ್ನು ಪ್ರದರ್ಶನ ಮಾಡಿ ಬಿ.ಜೆ.ಪಿ ಮೇಲೆ ಕೆಂಡಾಮಂಡಲವಾದರು ಡಿಕೆಶಿ.
ಒಂದು ಮತಕ್ಕೆ 10 ಸಾವಿರ ಕೊಡ್ತಿದ್ದಾರೆ ,ಈ ರೀತಿ ಚುನಾವಣೆ ಮಾಡಿದ್ರೇ ಜನ ಏನ್ ಮಾಡ್ಬೇಕು ?ಇಷ್ಟು ಭ್ರಷ್ಟ ಚುನಾವಣೆ, ಭ್ರಷ್ಟ ಪಕ್ಷ ನಾವ್ ನೋಡಿಲ್ಲ ಅವರ ಪಾರ್ಟಿಯವರೇ ನಮಗೆ ಈ ವಿಡಿಯೋಗಳನ್ನ ಕಳುಹಿಸಿದ್ದಾರೆ. ದುಡ್ಡಿನ ಕವರ್ ಮೇಲೆ ಕಮಲದ ಫೋಟೋ ಇದೆ. ಮುಖ್ಯಮಂತ್ರಿಗಳು ಪರ್ಮನೆಂಟ್ ಆಗಿ ಹುಬ್ಬಳ್ಳಿಯಲ್ಲೇ ಇರಲಿ
ಎಲ್ಲಾ ಮಂತ್ರಿಗಳೂ ಇದೀಗ ದುಡ್ಡಿನ ಮೂಲಕ ಮತ ಖರೀದಿಸುತ್ತಿದ್ದಾರೆ ಎಂದು ಗುಡುಗಿದರು .
PublicNext
28/10/2021 10:29 pm