ವಿಜಯಪುರ: ನಮಗೆ ನಿರೀಕ್ಷೆಗೂ ಮೀರಿ ರೆಸ್ಪಾನ್ಸ್ ಸಿಕ್ಕಿದೆ. ನಮ್ಮ ಪರವಾಗಿ ಹಳ್ಳಿ-ಪಟ್ಟಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಇದೆ,
ಕಾಂಗ್ರೆಸ್ ಪರವಾದ ಅಲೆ ಇದೆ ಬಿಜೆಪಿ ಬಳಿ ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಏನಿಲ್ಲ.ಮೋದಿ ಜನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಆಡಳಿತಕ್ಕೆ ಜನ ಬೇಸತ್ತಿದ್ದಾರೆ ಕರ್ನಾಟಕ ದಲ್ಲಿ ಜನ ಶಾಪ ಹಾಕ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ.
ಜೆಡಿಎಸ್ ಸ್ಪರ್ಧೆಯಲ್ಲೇ ಇಲ್ಲ,ಅಲ್ಪ ಸಂಖ್ಯಾತರು ಜಾತ್ಯಾತೀತ ಪಕ್ಷಕ್ಕೆ ಬೆಂಬಲ ಕೊಡ್ತಾರೆ.ಸಿಎಂ, ಬಿಜೆಪಿ ಸುನಾಮಿ ಇದೆ ಎನ್ನುತ್ತಿದ್ದಾರೆ ಅದೆಲ್ಲಾ ಸುಳ್ಳು ಎಂದು ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು
ಸಿಎಂ ಕುರಿಕಾಯ್ದಿದ್ದು ಎಲ್ಲಿ..? ಹೇಳ್ರಪ್ಪ ಎಲ್ಲಿ ಕುರಿ ಕಾದರು.ಕುಮಾರಸ್ವಾಮಿ ಕುರಿ ಮಂದೆಯಲ್ಲಿ ಎಲ್ಲಿ ಮಲಗಿದ್ರು. ಅಷ್ಟೊತ್ತಿಗೆ ಅವರ ತಂದೆ ಎಮ್ ಎಲ್ ಎ ಇದ್ರು ಆವಾಗ ಇವರು ಕುರಿಮಂದೆಯಲ್ಲಿ ಹೇಗೆ ಮಲಗ್ತಾರೆ. ನಾನು ಕಂಬಳಿ ರಾಜಕೀಯಕ್ಕೆ ತಂದಿರಲಿಲ್ಲ.ಇದನ್ನ ರಾಜಕೀಯಕ್ಕೆ ತಂದದ್ದು ಬೊಮ್ಮಾಯಿ.ನಾನು ಕಂಬಳಿ ನೇಯ್ದಿಲ್ಲ.ಆದ್ರೆ ಕುರಿ ಉಣ್ಣೆ ಮಾರಿದ್ದೀನಿ.ಕುಮಾಸ್ವಾಮಿ ಒಬ್ಬ ದೊಡ್ಡ ಸುಳ್ಳುಗಾರ.ಅವರ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದಾರೆ.
ಇನ್ನು ಡ್ರಗ್ಸ್ ವಿಚಾರವಾಗಿ ಮಾತನಾಡಿದ ಸಿದ್ದು, ತನಿಖಾಧಿಕಾರಿಗಳು ಡ್ರಗ್ಸ್ ಕೇಸ್ ಮುಚ್ಚಿ ಹಾಕ್ತಿದ್ದಾರೆ, ಕೇಸ್ ಇನ್ನೂ ಕ್ಲೋಸ್ ಆಗಿಲ್ಲ, ಯಾರಿಗೂ ರಕ್ಷಣೆ ಕೊಡುವ ಕೆಲಸ ಆಗಬಾರದು ಎಂದಿದ್ದಾರೆ.
PublicNext
27/10/2021 12:37 pm