ವಿಜಯಪುರ: ಅನೇಕ ಮಹಾಪುರುಷರು ಕಂಬಳಿ ಧರಿಸುತ್ತಿದ್ದರು. ಕುಂಕುಮ ಹಾಗೂ ಕಂಬಳಿ ಪವಿತ್ರವಾದ ಸಂಕೇತ. ದಯವಿಟ್ಟು ಕಂಬಳಿಯನ್ನು ರಾಜಕಾರಣಕ್ಕೆ ತರಬೇಡಿ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಂಬಳಿ ಬಗ್ಗೆ ಗೌರವ ಇದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ನಮ್ಮ ದೇಶದ ಕೋಟಿ ಕೋಟಿ ಜನರಿಗೆ ಕಂಬಳಿ ಬಗ್ಗೆ ಗೌರವ ಇದೆ. ಜಾತಿಕಾರಣ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಕನಕದಾಸರ ಹೆಸರು ಹೇಳುವ ಯೋಗ್ಯತೆ ಇಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ವಿಜಯಪುರ ಜಿಲ್ಲೆ ಯಂಕಂಚಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕನಕದಾಸರ ಜಯಂತಿ ಮಾಡುವ ಯೋಗ್ಯತೆ ಸಿದ್ದರಾಮಯ್ಯರಿಗೆ ಇರಲಿಲ್ಲ. ಜಾತಿ ಇರುವುದು ಸಂಸ್ಕಾರ ಮತ್ತು ವ್ಯವಸ್ಥೆಗಾಗಿ. ನಾನು ಕೂಡವ ಕರುಬ, ಅದಕ್ಕಿಂತಲೂ ಮೊದಲು ನಾನು ಹಿಂದುತ್ವವಾದಿ ಎಂದಿದ್ದಾರೆ.
ಇನ್ನು 'ಕುಮಾರಸ್ವಾಮಿ ಆರ್ಎಸ್‌ಎಸ್ ಚಡ್ಡಿ ಹಾಕಿದ್ದಾರೆ' ಎಂಬ ಜಮೀರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ, ಒಳಗಡೆ ಚಡ್ಡಿ ಇದೆಯೋ, ಬೇರೆ ಇದೆಯೋ ಗೊತ್ತಿಲ್ಲ. ಆದ್ರೆಜಮೀರ್ ಅಹ್ಮದ್ಗೆ ಒಂದು ಪಕ್ಷದ ನಿಷ್ಠೆಯಿಲ್ಲ
ಜಮೀರ್ ಮೊದಲು ತಾನು ಗಟ್ಟಿಯಾಗಿ ನಿಲ್ಲಬೇಕು. ಆಮೇಲೆ ಯಾರು ಚಡ್ಡಿ ಹಾಕಿದ್ದಾರೆಂದು ನೋಡೋಣ. ಜಮೀರ್ ಅಹ್ಮದ್ ಬಾಯಿಗೆ ಬಂದಂಗೆ ಮಾತಾಡ್ತಿದ್ದಾರೆ ರಾಜಕಾರಣದಲ್ಲಿ ಮಾತಿಗೂ ಕೂಡ ಲೆಕ್ಕಬೇಕು. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷ ಒಂದು ಸಿದ್ದರಾಮಯ್ಯ, ಇನ್ನೊಂದು ಡಿಕೆಶಿ ಬಣವಾಗಿ ಎರಡು ಹೋಳಾಗಲಿದೆ ಎಂದು ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
PublicNext
25/10/2021 09:06 pm