ಹಾನಗಲ್ : ಬೈ ಎಲೆಕ್ಷನ್ ಕಣ ರಂಗೇರುತ್ತಿದೆ. ಮತಯಾಚನೆಯಲ್ಲಿ ರಾಜಕೀಯ ಘಟಾನುಘಟಿಗಳು ಬೀದಿಗಿಳಿದು ಮತಯಾಚನೆ ಮಾಡುತ್ತಿದ್ದಾರೆ. ಇದರ ಮಧ್ಯೆ ಒಂದು ಪಕ್ಷದವರು ಮತ್ತೊಂದು ಪಕ್ಷವನ್ನು ದೂರುವುದನ್ನು ಸಾಧನೆಯನ್ನುವಂತೆ ಮಾಡಿದ್ದಾರೆ.
ಸದ್ಯ ಕುಮಾರಸ್ವಾಮಿ ವಿರುದ್ಧ ಹಾನಗಲ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಉಪಚುನಾವಣೆಯಲ್ಲಿ ನೇರಹಣಾಹಣಿ ಇರೋದು ಬಿಜೆಪಿ-ಕಾಂಗ್ರೆಸ್ ಮಧ್ಯೆ ಎಂದಿರುವ ಅವರು ಜೆಡಿಎಸ್ ಪಕ್ಷ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲಇದನ್ನ ನಾನು ಹೇಳ್ತಿಲ್ಲ ಜನಾನೇ ಹೇಳ್ತಿದ್ದಾರೆ ಎಂದು ಗೇಲಿ ಮಾಡಿದ್ದಾರೆ.
ಬಿಜೆಪಿ ಜೊತೆ ಜೆಡಿಎಸ್ ನವರು ಒಳ ಒಪ್ಪಂದ ಮಾಡಿಕೊಂಡು,ಎರಡು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರನ್ನು ಕಣಕ್ಕೆ ಇಳಿಸಿದ್ದಾರೆ. ಅದೇ ಅಲ್ಪಸಂಖ್ಯಾತರಿಗೆ ಮಂಡ್ಯ, ರಾಮನಗರ, ಹಾಸನದಲ್ಲಿ ಏಕೆ ಟಿಕೆಟ್ ಕೊಡಲ್ಲಜೆಡಿಎಸ್ ಗೆ ಅಲ್ಪಸಂಖ್ಯಾತರು ಗೆಲ್ಲೋದು ಮುಖ್ಯವಲ್ಲ ಕಾಂಗ್ರೆಸ್ ಸೋಲೋದು ಬಿಜೆಪಿ ಗೆಲ್ಲೋದೇ ಮುಖ್ಯ ಎಂದಿದ್ದಾರೆ.
ಕೋಮುವಾದಿ ಪಕ್ಷವನ್ನು ಜೆಡಿಎಸ್ ನವರು ಬೆಂಬಲಿಸುತ್ತಿದ್ದಾರೆ. ನೀವು ಜೆಡಿಎಸ್ ಗೆ ವೋಟ್ ಹಾಕಿದ್ರೆ ಅದು ಬಿಜೆಪಿಗೆ ಹಾಕಿದ ಹಾಗೆ, ಸುಮ್ಮನೇ ಆರ್ ಎಸ್ ಎಸ್ ಸರಿಯಿಲ್ಲವೆಂದು ಕುಮಾರಸ್ವಾಮಿ ಹೇಳ್ತಿದ್ದಾರೆ. ಹಾಗಾದ್ರೆ ಇಷ್ಟು ದಿನ ಕುಮಾರಸ್ವಾಮಿ ಆರ್ಎಸ್ಎಸ್ ಬೈದಿದ್ರಾ? ಚುನಾವಣೆ ಬಂದಿದ್ದಕ್ಕೆ ಕುಮಾರಸ್ವಾಮಿ ಬೈಯುತ್ತಿದ್ದಾರೆ. ಆರ್ ಎಸ್ ಎಸ್ ಕೋಮುವಾದಿ ಸಂಘಟನೆ ಎಂದು ಸಿದ್ದು ಕಿಡಿಕಾರಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಆರ್ ಎಸ್ ಎಸ್ ನವರು ಒಬ್ಬರಾದ್ರೂ ಸತ್ತಿದ್ದಾರಾ? ಮಾತೆತ್ತಿದ್ರೆ ನಾವು ದೇಶಭಕ್ತರು ಎಂದು ಹೇಳ್ತಾರೆ, ಹಾಗಾದ್ರೆ ಸ್ವಾತಂತ್ರ್ಯ ಹೋರಾಟದಲ್ಲಿ ಏಕೆ ಭಾಗಿಯಾಗಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
PublicNext
22/10/2021 08:39 pm