ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್‌ನವರು ಗುಡಿ ಕಟ್ಟಿದವರನ್ನು ಬಿಟ್ಟು ಕಳಸ ಇಟ್ಟವರನ್ನಷ್ಟೇ ನೆನೆಯುತ್ತಾರೆ: ಸಿಎಂ ವಾಗ್ದಾಳಿ

ಹಾನಗಲ್: ಉಪಚುನಾವಣೆ ಪ್ರಚಾರದಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಕೈ' ನಾಯಕರ ಮೇಲೆ ಧರ್ಮದ ಅಸ್ತ್ರ ಪ್ರಯೋಗಿಸಿದ ಸಿಎಂ, ಕಾಂಗ್ರೆಸ್‌ನವರು ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಜಾತಿ ಜಾತಿಗಳ ನಡುವೆ ದ್ವೇಷ ತುಂಬಿದ್ದಾರೆ. ಈ ಮೂಲಕ ಸಮಾಜದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದಾರೆ ಎಂದು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಉಪಚುನಾವಣೆ ಅನಿವಾರ್ಯ ವಾಗಿ ಬಂದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ ಸಿದ್ದರಾಮಯ್ಯನವರು ಸಿಎಂ‌ ಆಗಿದ್ದಾಗ ಈ ಕ್ಷೇತ್ರದ ಕಡೆ ತಿರುಗಿ ನೋಡಲಿಲ್ಲ. ಈ ಕ್ಷೇತ್ರಕ್ಕೆ ಸಿದ್ದರಾಮಯ್ಯನವರ ಕೊಡುಗೆ ಏನು? ಧರ್ಮಾ ನದಿ ಆಧುನೀಕರಣ ಮಾಡಲಿಲ್ಲ. ಅಧಿಕಾರ ಇದ್ದಾಗ ಕಾಂಗ್ರೆಸ್ ಹಾನಗಲ್ ಕ್ಷೇತ್ರವನ್ನ ಉದ್ದಾರ ಮಾಡಿಲ್ಲ. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿದಾನೆ ಏನು ಚಿಂತೆ ಮಾಡಬೇಡ ಕಾಂಗ್ರೆಸ್‌ನವರು ಸುಳ್ಳಿನ ಸರದಾರರು. ಗುಡಿ ಕಟ್ಟಿದವರನ್ನ ಬಿಟ್ಟು ಕಳಸ ಇಟ್ಟವರನ್ನ ನೆನಪು ಮಾಡಿಕೊಂಡಂತೆ ಎಂದು ಸಿಎಂ ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.

Edited By : Nagesh Gaonkar
PublicNext

PublicNext

21/10/2021 07:07 pm

Cinque Terre

96.81 K

Cinque Terre

1

ಸಂಬಂಧಿತ ಸುದ್ದಿ