ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

RSS ಬಗ್ಗೆ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ : ಬಿವೈ ವಿಜಯೇಂದ್ರ

ಕೊಪ್ಪಳ : ಕಾಂಗ್ರೆಸ್ ಜೆ.ಡಿ.ಎಸ್ ನಾಯಕರಿಗೆ ಯೋಗ್ಯತೆ ಇಲ್ಲ. ಆರ್ ಎಸ್ ಎಸ್ ಬಗ್ಗೆ ಮಾತನಾಡ್ತಿರೊ ಇವರು ಅಲ್ಪ ಸಂಖ್ಯಾತರ ಓಟಗಾಗಿ ಕಸರತ್ತು ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು ಹಲವು ದಶಕಗಳಿಂದ RSS ಸಮಾಜಸೇವೆ ಎಲ್ಲರಿಗೂ ಗೊತ್ತಿದೆ. ಚುನಾವಣೆಯಲ್ಲಿ ಇಂತಹ ಹೇಳಿಕೆ ಇಂದ ಅಲ್ಪ ಸಂಖ್ಯಾತರ ಒಲೈಕೆ ಮಾಡುತ್ತಿದ್ದಾರೆ. ಈ ತರಹದ ಹೇಳಿಕೆ ಇಂದ ಅವರು ದೊಡ್ಡ ಮನುಷ್ಯರ ಆಗ್ತಾರೆ ಅಂದ್ರೆ ಅದು ಮೂರ್ಖತನದ ಪರಮಾವಧಿ ಕಾಂಗ್ರೆಸ್ ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದ ವಿಜಯೇಂದ್ರ ಕಾಂಗ್ರೆಸ್ ನಾಯಕರು ಹತಾಶೆ ಇಂದ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

ಮೋದಿ,ಯಡಿಯೂರಪ್ಪ, ಬೊಮ್ಮಾಯಿ ಕೊಟ್ಟ ಕಾರ್ಯಕ್ರಮಗಳ ಆಧಾರದ ಮೇಲೆ ನಾವು ಮತ ಕೇಳುತ್ತೇವೆ. ಕಾಂಗ್ರೆಸ್ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಅಸ್ತಿತ್ವ ಕಳೆದಿಕೊಂಡಿದೆ. ಹೀಗಾಗಿ ಹತಾಶರಾಗಿ ಬಿಜೆಪಿ ವಿರುದ್ದ ಮಾತನಾಡುತ್ತಿದ್ದಾರೆ. ಜನರ ಮುಂದೆ ಹೇಳೋ ಯಾವುದೇ ಕಾರ್ಯಕ್ರಮ ಕಾಂಗ್ರೆಸ್ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ವಿರುದ್ಧ ಟೀಕೆ ಮಾಡಿತ್ತಿದ್ದಾರೆ. ಇದು ಅವರಿಗೆ ಶೋಭೆ ತರೋದಿಲ್ಲ ಎಂದ ವಿಜಯೇಂದ್ರ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

21/10/2021 04:07 pm

Cinque Terre

64.32 K

Cinque Terre

4

ಸಂಬಂಧಿತ ಸುದ್ದಿ