ಚಿತ್ರದುರ್ಗ: ರೈತರು ಬಳಸುವ ಪ್ರತಿ ಲೀಟರ್ ಡಿಸೈಲ್ ಗೆ 20 ರೂಪಾಯಿ ಸಬ್ಸಿಡಿ ಕೊಡಲು ಸರ್ಕಾರ ಚಿಂತನೆ ನಡೆಸಿದೆ. ಶೀಘ್ರದಲ್ಲಿಯೇ ಸರ್ಕಾರ ರೈತರಿಗೆ ಆ ಸಿಹಿಸುದ್ದಿ ಕೊಡುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಚಿತ್ರದುರ್ಗದ ಮುರುಘಾಮಠದಲ್ಲಿ ಆಯೋಜಿಸಿದ್ದ ಕೃಷಿ ಮತ್ತು ಕೈಗಾರಿಕೆ ಮೇಳ ಉದ್ಘಾಟಿಸಿ ಮಾತನಾಡಿದ ಸಚಿವ ಬಿ.ಸಿ.ಪಾಟೀರಲು, ಸರ್ಕಾರ ರೈತರು ಬಳಸುವ ಪ್ರತಿ ಲೀಟರ್ ಡಿಸೈಲ್ ಗೆ 20 ರೂಪಾಯಿ ಸಬ್ಸಿಡಿ ಕೊಡಲು ಚಿಂತನೆ ನಡೆಸಿದೆ. ಯಡಿಯೂರಪ್ಪನವರು ಕೂಡ ಇದಕ್ಕೆ ಸಮ್ಮತಿಸಿದ್ದರು. ಆದರೆ ಕೋವಿಡ್ ನಿಂದ ಅದು ಸಾಧ್ಯವಾಗಿರಲಿಲ್ಲ ಅಷ್ಟೆ.ಈಗ ಅದು ಶೀಘ್ರದಲ್ಲಿಯೇ ಜಾರಿಯಾಗುತ್ತದೆ ಅಂತಲೇ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
PublicNext
14/10/2021 04:23 pm