ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಯಲ್ಲಿ ಐವರಿದ್ದರೂ, ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಒಂದೇ ಮತ.!

ಚೆನ್ನೈ: ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಸ್ಥಳೀಯ ಚುನಾವಣೆ ನಡೆಯುತ್ತಿದ್ದು, ಆಡಳಿತ ಪಕ್ಷ ಡಿಎಂಕೆ ಭರ್ಜರಿ ಜಯ ಸಾಧಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದರ ಮಧ್ಯೆ ವಿಚಿತ್ರಕಾರಿ ಘಟನೆವೊಂದು ನಡೆದಿದ್ದು, ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಕೇವಲ ಒಂದೇ ಒಂದು ವೋಟ್​ ಪಡೆದುಕೊಂಡಿದ್ದಾರೆ.

ಚುನಾವಣೆಯಲ್ಲಿ ಒಂದು ಮತವನ್ನು ಪಡೆಯುವುದು ದೊಡ್ಡ ಸುದ್ದಿಯಲ್ಲ. ಆದರೆ ಅಭ್ಯರ್ಥಿಯ ಮನೆಯಲ್ಲಿ 5 ಮಂದಿ ಇದ್ದರೂ ಅವರು ಒಂದೇ ಮತವನ್ನು ಪಡೆದ ಕಾರಣ ಸುದ್ದಿಯಾಗಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳಂ ವಾರ್ಡ್​​ನಿಂದ ಬಿಜೆಪಿ ಅಭ್ಯರ್ಥಿಯಾಗಿ ಡಿ. ಕಾರ್ತಿಕ್​ ಸ್ಪರ್ಧೆ ಮಾಡಿದ್ದರು. ಇವರ ಮನೆಯಲ್ಲಿ ಒಟ್ಟು ಐವರು ಸದಸ್ಯರಿದ್ದರು. ಆದರೆ ಪಡೆದುಕೊಂಡಿರುವುದು ಮಾತ್ರ ಒಂದೇ ಒಂದು ವೋಟ್​. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದ್ದು, #Single_Vote_BJP ಎಂಬ ಹ್ಯಾಷ್​ ಟ್ಯಾಗ್​ನೊಂದಿಗೆ ಟ್ರೆಂಡಿಂಗ್​ ಆಗಿದೆ.

ಇದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕಾರ್ಯಕರ್ತೆ ಮೀನಾ ಕಂದಸಾಮಿ ಟ್ವೀಟ್ ಮಾಡಿ, ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ ಒಂದೇ ಒಂದು ಮತ ಪಡೆದುಕೊಂಡಿದ್ದಾರೆ. ಇವರ ಮನೆಯ ನಾಲ್ವರು ಬೇರೆ ಪಕ್ಷಕ್ಕೆ ಮತ ಹಾಕಿರುವ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

ತಮಿಳುನಾಡಿನಲ್ಲಿ ಅಕ್ಟೋಬರ್​​ 6 ಮತ್ತು 9ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದ್ದು, 27,003 ಹುದ್ದೆಗಳಿಗೆ 79,433 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಕಾರ್ತಿಕ್​ ಸ್ಪರ್ಧೆ ಮಾಡಿದ್ದ ವಾರ್ಡ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರ ಪೋಸ್ಟರ್​​ಗಳೊಂದಿಗೆ ಪ್ರಚಾರ ಮಾಡಿದ್ದರು. ಆದರೆ, ಕೇವಲ ಒಂದು ಮತ ಪಡೆದುಕೊಂಡಿದ್ದಾರೆ.

ಎಲ್ಲ ವಾರ್ಡ್​ಗಳ ಮತ ಎಣಿಕೆ ಇಂದು ನಡೆಯುತ್ತಿದ್ದು, ಸಂಜೆ 7 ಗಂಟೆಯವರೆಗೂ ಡಿಎಂಕೆ 311 ಪಂಚಾಯತ್​, ಎಡಿಎಂಕೆ 52 ಪಂಚಾಯತ್​​, ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್​​ 11 ಪಂಚಾಯತ್​​ಗಳಲ್ಲಿ ಗೆಲುವು ಸಾಧಿಸಿರುವುದಾಗಿ ತಿಳಿದು ಬಂದಿದೆ.

Edited By : Vijay Kumar
PublicNext

PublicNext

12/10/2021 08:32 pm

Cinque Terre

42.9 K

Cinque Terre

27

ಸಂಬಂಧಿತ ಸುದ್ದಿ