ಚಿಕ್ಕಮಗಳೂರು: ಸಚಿವರು, ಶಾಸಕರ ಪತ್ನಿಯರು ಬುರ್ಖಾ ಧರಿಸಿ ಮುಸ್ಲಿಮರ ಬೀದಿಗೆ ಹೋದರೆ ಒಂದೇ ಒಂದು ವೋಟ್ ಬೀಳಲ್ಲ. ಬಿಜೆಪಿಯವರು ವೋಟಿಗಾಗಿ ಸೆಕ್ಯೂಲರ್ ಆಗಲು ಹೊರಟಿದ್ದಾರೆ. ದೇವಸ್ಥಾನ ಕೆಡವಿದ್ದು, ಗಣೇಶೋತ್ಸವ, ದತ್ತಪೀಠ ವಿಚಾರದಲ್ಲಿ ತೆಗೆದುಕೊಂಡ ಕ್ರಮ ನೋಡಿದರೆ ಹಾಗೆಯೇ ಅನ್ನಿಸುತ್ತದೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕಾಂಗ್ರೆಸ್ಸಿಗರಲ್ಲಿ ಇರುವ ಗಟ್ಟಿತನ ಇಂದು ಬಿಜೆಪಿಯವರಲ್ಲಿ ಕಾಣುತ್ತಿಲ್ಲ. ಹಿಂದೂಗಳು ನಿಮ್ಮನ್ನು ಗೆಲ್ಲಿಸಿದ್ದಾರೆ ಎನ್ನುವುದು ನೆನಪಿರಲಿ, ಹಿಂದೂಗಳಿಗೆ ನ್ಯಾಯ ಒದಗಿಸಿ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಇರೋದೇ ಮುಸ್ಲಿಮರಿಗಾಗಿ. ನಾಳೆ ಅವರ ಮಕ್ಕಳು, ಮೊಮ್ಮಕ್ಳು ಮುಸ್ಲಿಮರಾಗ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದರು.
PublicNext
09/10/2021 04:49 pm