ಬೆಳಗಾವಿ: ಬೆಳಗಾವಿಯಲ್ಲಿ ಸುರಿದ ಸಸತ ಮಳೆಗೆ ನಿನ್ನೆ ಇಲ್ಲಿಯ ಬಡಾಲ ಅಂಕಲಗಿ ಗ್ರಾಮದ ಮನೆ ಕುಸಿದಿತ್ತು. ಮಕ್ಕಳು ಸೇರಿ ೭ ಜನ ಮೃತಪಟ್ಟಿದ್ದರು. ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಇವತ್ತು ಟ್ವಿಟರ್ ಮೂಲಕ ತಲಾ ೨ ಲಕ್ಷ ಪರಿಹಾರ ಘೋಷಿಸಿದ್ದಾರೆ. ದುರ್ಘಟನೆ ನಡೆದ ದಿನವೇ ಸಿ.ಎಂ.ಬಸವರಾಜ್ ಬೊಮ್ಮಾಯಿ,ಮೃತರ ಮನೆಯ ಯಜಮಾನರೊಟ್ಟಿಗೆ ಫೋನ್ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದರು. ತಲಾ ೫ ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿದ್ದರು.
PublicNext
07/10/2021 01:10 pm